Sunday, 8th September 2024

ಅತಿ ಕಡಿಮೆ ಎಸೆತಗಳಲ್ಲಿ 50 ವಿಕೆಟ್‌: ಕುಲದೀಪ್ ವಿಶೇಷ ಸಾಧನೆ

ರ್ಮಶಾಲಾ: ಕುಲದೀಪ್ ಯಾದವ್ ಟೀಂ ಇಂಡಿಯಾ ಪರ ಅದ್ಭುತ ಬೌಲಿಂಗ್ ಮಾಡುವ ಮೂಲಕ ವಿಶೇಷ ಸ್ಥಾನ ಗಳಿಸಿದ್ದಾರೆ. ಕುಲದೀಪ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 50 ವಿಕೆಟ್‌ಗಳನ್ನು ಪೂರೈಸಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಐದನೇ ಮತ್ತು ಕೊನೆಯ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದೆ.

ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಈ ಅವಧಿಯಲ್ಲಿ ಕುಲದೀಪ್ 100 ವರ್ಷಗಳಲ್ಲಿ ಮಾಡದ ಸಾಧನೆ ಮಾಡಿದ್ದಾರೆ.

ವಾಸ್ತವವಾಗಿ, ಕುಲದೀಪ್ ಕಳೆದ 100 ವರ್ಷಗಳಲ್ಲಿ ಅತಿ ಕಡಿಮೆ ಎಸೆತಗಳನ್ನು ಬೌಲಿಂಗ್ ಮಾಡುವ ಮೂಲಕ 50 ವಿಕೆಟ್‌ಗಳನ್ನು ಕಬಳಿಸುವ ವಿಷಯದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಕುಲದೀಪ್ 1871 ಎಸೆತಗಳನ್ನು ಎಸೆದು 50 ವಿಕೆಟ್ ಪೂರೈಸಿದ್ದಾರೆ. ಅವರ ಈವರೆಗಿನ ವೃತ್ತಿಜೀವನ ಅತ್ಯುತ್ತಮವಾಗಿದೆ. ಕುಲದೀಪ್ ಟೆಸ್ಟ್‌ನಲ್ಲಿ 4 ಬಾರಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ದಾರೆ.

ಭಾರತ ಪರ ಟೆಸ್ಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿ ನೋಡಿದರೆ ಕುಲ್ ದೀಪ್ 43ನೇ ಸ್ಥಾನದಲ್ಲಿದ್ದಾರೆ. ಈ ವಿಚಾರದಲ್ಲಿ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದಾರೆ. ಕುಂಬ್ಳೆ 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್ ಪಡೆದಿದ್ದಾರೆ. ರವಿಚಂದ್ರನ್ ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ 100 ಪಂದ್ಯಗಳಲ್ಲಿ 507 ವಿಕೆಟ್ ಪಡೆದಿದ್ದಾರೆ. ಕಪಿಲ್ ದೇವ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು 131 ಪಂದ್ಯಗಳಲ್ಲಿ 434 ವಿಕೆಟ್ ಪಡೆದಿದ್ದಾರೆ.

ಟೆಸ್ಟ್ ಸರಣಿಯ ಐದನೇ ಮತ್ತು ಕೊನೆಯ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದೆ. ಇನ್ನು ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 218 ರನ್ ಗಳಿಗೆ ಆಲೌಟ್ ಆಗಿದೆ. ಈ ವೇಳೆ ಕುಲದೀಪ್ ಯಾದವ್ 15 ಓವರ್ ಗಳಲ್ಲಿ 72 ರನ್ ನೀಡಿ 5 ವಿಕೆಟ್ ಪಡೆದರು. ಬೆನ್ ಡಕೆಟ್, ಆಲಿ ಪೋಪ್, ಜಾಕ್ ಕ್ರಾಲಿ, ಜಾನಿ ಬೈರ್‌ಸ್ಟೋ ಮತ್ತು ನಾಯಕ ಬೆನ್ ಸ್ಟೋಕ್ಸ್‌ಗೆ ಕುಲದೀಪ್ ಪೆವಿಲಿಯನ್ ಹಾದಿ ತೋರಿಸಿದರು.

Leave a Reply

Your email address will not be published. Required fields are marked *

error: Content is protected !!