Sunday, 8th September 2024

ಲಹಿರು ತಿರಿಮನ್ನೆ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ವಿದಾಯ

lahiru-thirimanne
ಕೋಲಂಬೋ: ಅಂತರಾಷ್ಟ್ರೀಯ ಕ್ರಿಕೆಟ್‌’ನ ಎಲ್ಲಾ ಫಾರ್ಮ್ಯಾಟ್‌ಗಳಿಗೆ ಲಹಿರು ತಿರಿಮನ್ನೆ ನಿವೃತ್ತಿ ಘೋಷಿಸಿದ್ದಾರೆ.

ಶ್ರೀಲಂಕಾದ ವಿಶ್ವ ಚಾಂಪಿಯನ್ ಆಟಗಾರ ಲಹಿರು ತಿರಿಮನ್ನೆ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ವಿದಾಯ ಹೇಳಿದ್ದಾರೆ.

ತಿರಿಮನ್ನೆ 2014ರಲ್ಲಿ ಟಿ20 ವಿಶ್ವಕಪ್ ಗೆದ್ದ ಶ್ರೀಲಂಕಾ ತಂಡದ ಭಾಗವಾಗಿದ್ದರು. ಮಾರ್ಚ್ 2022 ರಲ್ಲಿ ಶ್ರೀಲಂಕಾ ಪರ ಕೊನೆಯ ಪಂದ್ಯ ಆಡಿದ್ದು, ಅದು ಟೆಸ್ಟ್ ಆಗಿತ್ತು. ಮತ್ತೊಂ ದೆಡೆ, ಲಹಿರು ತಿರಿಮನ್ನೆ 4 ವರ್ಷಗಳ ಹಿಂದೆ ಶ್ರೀಲಂಕಾ ಪರ ಕೊನೆಯ ಏಕದಿನ ಪಂದ್ಯ ವನ್ನು ಆಡಿದ್ದರು.

ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡ ಲಹಿರು ತಿರಿಮನ್ನೆ, ಒಬ್ಬ ಕ್ರೀಡಾಪಟುವಾಗಿ ನಾನು ನನ್ನ ಅತ್ಯುತ್ತಮವಾದುದನ್ನು ನೀಡಿದ್ದೇನೆ. ನಾನು ನನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡಿ ದ್ದೇನೆ, ನಾನು ಆಟವನ್ನು ಗೌರವಿ ಸುತ್ತೇನೆ. ನನ್ನ ಮಾತೃಭೂಮಿಗೆ ಪ್ರಾಮಾಣಿಕವಾಗಿ ಮತ್ತು ನೈತಿಕವಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ನಿವೃತ್ತಿಯ ನಿರ್ಧಾರ ತೆಗೆದುಕೊಳ್ಳುವುದು ತುಂಬಾ ಕಷ್ಟಕರವಾಗಿತ್ತು. 13 ವರ್ಷಗಳ ಪಯಣದಲ್ಲಿ ನನಗೆ ಸವಿ ನೆನಪುಗಳು ಸಿಕ್ಕವು. ಈ ಪ್ರಯಾಣದಲ್ಲಿ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಭಾವನಾತ್ಮಕ ಸಂದೇಶ ಕಳುಹಿಸಿ ದ್ದಾರೆ.

ಲಹಿರು ತಿರಿಮನ್ನೆ ಶ್ರೀಲಂಕಾ ಪರ 44 ಟೆಸ್ಟ್, 127 ODI ಮತ್ತು 26 T20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 3 ಶತಕ ಮತ್ತು 10 ಅರ್ಧ ಶತಕಗಳ ಸಹಾಯದಿಂದ 2088 ರನ್ ಗಳಿಸಿದ್ದಾರೆ. ಏಕದಿನದಲ್ಲಿ 34.77ರ ಸರಾಸರಿಯಲ್ಲಿ 3164 ರನ್ ಗಳಿಸಿದ್ದಾರೆ.

ಟಿ 20 ನಲ್ಲಿ 16.17 ರ ಸರಾಸರಿಯಲ್ಲಿ 291 ರನ್ ಸೇರಿಸಿದ್ದಾರೆ. ತಿರಿಮನ್ನೆ 2014ರಲ್ಲಿ ಟಿ20 ವಿಶ್ವಕಪ್ ಗೆದ್ದ ಶ್ರೀಲಂಕಾ ತಂಡದ ಭಾಗವಾಗಿದ್ದರು. ಶ್ರೀಲಂಕಾ ಫೈನಲ್‌ನಲ್ಲಿ ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸಿತು.

Leave a Reply

Your email address will not be published. Required fields are marked *

error: Content is protected !!