Sunday, 15th December 2024

ಪುರುಷರ ಸಿಂಗಲ್ ಪ್ರಶಸ್ತಿ ಗೆದ್ದ ಲಕ್ಷ್ಯ ಸೇನ್

ನವದೆಹಲಿ : ಹಾಲಿ ವಿಶ್ವ ಚಾಂಪಿಯನ್ ಸಿಂಗಾಪುರದ ಲೋಹ್ ಕೀನ್ ಯೂ ಅವರನ್ನು ಇಂಡಿಯನ್ ಶಟ್ಲರ್ ಲಕ್ಷ್ಯ ಸೇನ್ ಅವರು 24-22, 21-17ರಿಂದ ಸೋಲಿಸಿ ಇಂಡಿಯಾ ಓಪನ್ʼನ ಪುರುಷರ ಸಿಂಗಲ್ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡರು.

ಸೇನ್ ವಿಶ್ವ ಚಾಂಪಿಯನ್ ಶಿಪ್ ಸೆಮಿ ಫೈನಲ್ʼಗೆ ಬಂದ ಒಂದು ತಿಂಗಳ ನಂತರ ಐತಿಹಾಸಿಕ ಪ್ರಶಸ್ತಿ ಗೆಲುವು ದಕ್ಕಿದೆ.

ಮೂರು ಬಾರಿ ವಿಶ್ವ ಚಾಂಪಿಯನ್ʼಗಳಾದ ಮೊಹಮ್ಮದ್ ಅಹ್ಸಾನ್ ಮತ್ತು ಇಂಡೋನೇಷ್ಯಾದ ಹೆಂಡ್ರಾ ಸೆಟಿಯಾವನ್ ವಿರುದ್ಧ ನೇರ ಆಟದ ಗೆಲುವು ದಾಖಲಿಸಿದ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಭಾರತ ಓಪನ್ʼನ ಡಬಲ್ಸ್ ಪ್ರಶಸ್ತಿಯನ್ನ ಗೆದ್ದ ಭಾರತದ ಮೊದಲ ಪುರುಷರ ತಂಡ ಎಂಬ ಹೆಗ್ಗಳಿಕೆಗೆ ಪಡೆದರು.