ಕೊಲಂಬೋ: ಎರಡನೇ ಆವೃತ್ತಿಯ ಲೆಜೆಂಡ್ಸ್ ಕ್ರಿಕೆಟ್ ಟೂರ್ನಮೆಂಟ್ ಶ್ರೀಲಂಕಾದಲ್ಲಿ ನಡೆಯಲಿದೆ. ಮಾ.8 ರಿಂದ ಟೂರ್ನಿ ಆರಂಭವಾಗಲಿದೆ.
ಈ ಲೀಗ್‌ನ ಅಂತಿಮ ಪಂದ್ಯ ಮಾ.19 ರಂದು ನಡೆಯಲಿದೆ. ಮಾ.22 ರಿಂದ ಆರಂಭವಾಗಲಿರುವ ಐಪಿಎಲ್ಗಾಗಿ ಇಡೀ ಕ್ರಿಕೆಟ್ ಲೋಕವೇ ಕಾದು ಕುಳಿತಿದೆ.
ಐಪಿಎಲ್‌ಗೂ ಮುನ್ನವೇ ಅಭಿಮಾನಿಗಳು ಲೆಜೆಂಡ್ಗಳ ಕ್ರಿಕೆಟ್ ಲೀಗ್ ಅನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಅಂದರೆ ಐಪಿಎಲ್‌ನಂತೆಯೇ ಮತ್ತೊಂದು ಲೀಗ್ ಘೋಷಣೆಯಾಗಿದ್ದು, ಈ ಲೀಗ್‌ನಲ್ಲಿ ಮಾಜಿ ಕ್ರಿಕೆಟಿಗರು ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಈ ಲೀಗ್ ಕೇವಲ 90 ಎಸೆತಗಳ ಅಂದರೆ 15 ಓವರ್ಗಳದ್ದಾಗಿದೆ. ಈ 90 ಎಸೆತಗಳ ಲೀಗ್‌ನಲ್ಲಿ ಭಾರತ ಮತ್ತು ಇತರ ಹಲವು ದೇಶಗಳ ಶ್ರೇಷ್ಠ ಆಟಗಾರರು ಆಡುವುದನ್ನು ಕಾಣಬಹುದು. ಈ ಲೀಗ್ ಬಗ್ಗೆ ಹೆಚ್ಚಿನ ವಿವರ ಈ ಕೆಳಗಿನಂತಿದೆ
ಇದಕ್ಕೂ ಮೊದಲು, ಇಂಗ್ಲೆಂಡ್‌ನಲ್ಲಿ ಹಂಡ್ರೆಡ್ ಲೀಗ್ ಪ್ರಾರಂಭವಾಯಿತು, ಇದರಲ್ಲಿ ತಂಡವು ತನ್ನ ಇನ್ನಿಂಗ್ಸ್‌ನಲ್ಲಿ ಕೇವಲ 100 ಎಸೆತಗಳನ್ನು ಮಾತ್ರ ಆಡುತ್ತಿತ್ತು. ಈಗ ಅದಕ್ಕಿಂತ ಕಡಿಮೆ 90 ಎಸೆತಗಳ ಲೀಗ್ ನಡೆಯಲಿದೆ. ತಲಾ 15 ಓವರ್‌ಗಳ ಈ ಲೀಗ್ ಅತ್ಯಂತ ರೋಚಕವಾಗಿರು ತ್ತದೆ ಎಂದು ನಿರೀಕ್ಷಿಸ ಲಾಗಿದೆ. ವಿಶೇಷವೆಂದರೆ ಈ ಲೀಗ್‌ನಲ್ಲಿ ಭಾರತ ಸೇರಿದಂತೆ ಹಲವು ದೇಶಗಳ ಮಾಜಿ ಅನುಭವಿ ಆಟಗಾರರು ಆಡಲಿದ್ದಾರೆ.
ಈ ಲೀಗ್‌ನಲ್ಲಿ ದುಬೈ ಜೈಂಟ್ಸ್, ರಾಜಸ್ಥಾನ್ ಕಿಂಗ್ಸ್, ಡೆಲ್ಲಿ ಡೆವಿಲ್ಸ್, ಕ್ಯಾಂಡಿ ಸ್ಯಾಂಪ್ ಆರ್ಮಿ, ಪಂಜಾಬ್ ರಾಯಲ್ಸ್, ಎನ್‌ವೈ ಸೂಪರ್‌ಸ್ಟಾರ್ಸ್ ಸ್ಟ್ರೈಕರ್ಸ್ ಮತ್ತು ಕೊಲಂಬೊ ಲಯನ್ಸ್ ಸೇರಿದಂತೆ ಒಟ್ಟು 7 ತಂಡಗಳು ಭಾಗವಹಿಸಲಿವೆ.
ಮಾ.8ರಿಂದ ಆರಂಭವಾಗಿ ಮಾರ್ಚ್ 19ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ಇದು ಶ್ರೀಲಂಕಾದಲ್ಲಿ ನಡೆಯ ಲಿರುವ ಲೀಗ್‌ನ ಎರಡನೇ ಸೀಸನ್ ಆಗಿದೆ. 2023 ರಲ್ಲಿ ನಡೆದ ಲೀಗ್‌ನ ಮೊದಲ ಸೀಸನ್ ಭಾರತದಲ್ಲಿ ನಡೆದಿತ್ತು.