Wednesday, 11th December 2024

ಟಿ20 ಸರಣಿಯಿಂದ ಲುಂಗಿ ಎನ್‌ಗಿಡಿ ಔಟ್, ಹೆಂಡ್ರಿಕ್ಸ್ ಸೇರ್ಪಡೆ

ಡರ್ಬನ್: ಭಾನುವಾರ ಭಾರತದ ವಿರುದ್ಧ ಟಿ-20 ಪಂದ್ಯಗಳು ಆರಂಭವಾಗುತ್ತಿದೆ. ದಕ್ಷಿಣ ಆಫ್ರಿಕಾ ಪಡೆಯ ಸ್ಟಾರ್​ ಅನುಭವಿ ಬೌಲರ್​ ಲುಂಗಿ ಎನ್‌ಗಿಡಿ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಲುಂಗಿ ಅವರ ಎಡ ಪಾದ ನೋವಿಗೆ ತುತ್ತಾಗಿರುವುದರಿಂದ ಅವರನ್ನು ಕೈಬಿಡಲಾಗಿದೆ.

ಎರಡು ಪಂದ್ಯಗಳ ಟೆಸ್ಟ್ ಸರಣಿ ತಯಾರಿಗಾಗಿ ಡಿಸೆಂಬರ್ 14-17 ರವರೆಗೆ ನಾಲ್ಕು- ದಿನದ ಸ್ಥಳೀಯ ಪಂದ್ಯದಲ್ಲಿ ಆಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈಗ ಅವರು ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಇರಲಿದ್ದಾರೆ.

33ರ ಹರೆಯದ ಹೆಂಡ್ರಿಕ್ಸ್ 2021ರಲ್ಲಿ ಕೊನೆಯದಾಗಿ ದಕ್ಷಿಣ ಆಫ್ರಿಕಾ ಪರ ಟಿ-20ಗಳಲ್ಲಿ ಆಡಿದ್ದರು. ಅವರು 19 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು 25 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಡೆನ್ ಮಾರ್ಕ್ರಾಮ್ ನಾಯಕತ್ವದ ದಕ್ಷಿಣ ಆಫ್ರಿಕಾವು ಡಿ.10, 12 ಮತ್ತು 14 ರಂದು ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡದ ವಿರುದ್ಧ ಕ್ರಮವಾಗಿ ಡರ್ಬನ್, ಜಿಕೆಬರ್ಹಾ ಮತ್ತು ಜೋಹಾನ್ಸ್‌ಬರ್ಗ್‌ನಲ್ಲಿ ಮೂರು ಪಂದ್ಯಗಳನ್ನು ಆಡಲಿದೆ.

ಭಾನುವಾರದಿಂದ ಪಂದ್ಯಗಳು ಆರಂಭವಾಗಲಿರುವ ಕಾರಣ ಭಾರತದ ಟಿ20 ತಂಡ ಗುರುವಾರ ದಕ್ಷಿಣ ಆಫ್ರಿಕಾವನ್ನು ತಲುಪಿದೆ.

ದಕ್ಷಿಣ ಆಫ್ರಿಕಾ ಟಿ20 ತಂಡ: ಏಡೆನ್ ಮಾರ್ಕ್ರಾಮ್ (ನಾಯಕ), ಓಟ್ನಿಯೆಲ್ ಬಾರ್ಟ್‌ಮನ್, ಮ್ಯಾಥ್ಯೂ ಬ್ರೀಟ್ಜ್‌ಕೆ, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಟ್ಜಿ (1ನೇ ಮತ್ತು 2ನೇ T20I), ಡೊನೊವನ್ ಫೆರೇರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್ (1ನೇ ಮತ್ತು 2ನೇ T20I), ಕೆರಾಜ್, ಕೆಹಾವ್ಸ್, ಕೆಹಾವ್ಸ್ ಡೇವಿಡ್ ಮಿಲ್ಲರ್, ಬ್ಯೂರಾನ್ ಹೆಂಡ್ರಿಕ್ಸ್, ಆಂಡಿಲ್ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ಲಿಜಾದ್ ವಿಲಿಯಮ್ಸ್.

ಭಾರತ ಟಿ20 ತಂಡ: ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿ.ಕೀ), ಜಿತೇಶ್ ಶರ್ಮಾ (ವಿ,ಕೀ), ರವೀಂದ್ರ ಜಡೇಜಾ (ಉ.ನಾ), ವಾಷಿಂಗ್ಟನ್ ಸುಂದರ್​, ರವಿ ಬಿಷ್ಣೋಯ್, ಕುಲ್ದೀಪ್​ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹಾರ್.