ರಾಜ್ಯದ ಎಂಟು ನಗರಗಳ 23 ಸ್ಥಳಗಳಲ್ಲಿ ಕೆವೈಐಜಿ 2022 ನಡೆಯಲಿದ್ದು, ಸುಮಾರು 6,000 ಕ್ರೀಡಾಪಟುಗಳು 27 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿ ದ್ದಾರೆ.
ಇದೇ ಮೊದಲ ಬಾರಿಗೆ ಕಯಾಕಿಂಗ್, ಕ್ಯಾನೋಯಿಂಗ್, ಕ್ಯಾನೋ ಸ್ಲಾಲೋಮ್ ಮತ್ತು ಫೆನ್ಸಿಂಗ್ ನಂತಹ ಕ್ರೀಡೆಗಳು ಖೇಲೋ ಇಂಡಿಯಾ ಯೂತ್ ಗೇಮ್ಸ್ ನ ಭಾಗವಾಗಲಿವೆ. ‘ಖೇಲೋ ಇಂಡಿಯಾ ಯೂತ್ ಗೇಮ್ಸ್ ಆಯೋಜಿಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.
‘ಹಿಂದೂಸ್ತಾನ್ ಕಾ ದಿಲ್ ಧಡ್ಕಾ ದೋ’ ಎಂಬ ಧ್ಯೇಯವಾಕ್ಯದೊಂದಿಗೆ ಸೋಮವಾರದಿಂದ 13 ದಿನಗಳ ಕಾಲ ಕ್ರೀಡಾಕೂಟ ಆರಂಭವಾಗಲಿದೆ.