ಟೋಕಿಯೊ: ಮಹಿಳೆಯರ ಟೇಬಲ್ ಟೆನ್ನಿಸ್‍ನಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿದ ಭಾರತದ ಆಟಗಾರ್ತಿ ಮಾಣಿಕಾ ಬಾತ್ರಾ ಅವರು ಮೂರನೇ ಸುತ್ತಿಗೆ ಅರ್ಹತೆ ಪಡೆದರು. ಉಕ್ರೇನ್‍ನ ಮಾರ್ಗರಿಟಾ ಪೆಸೊಟ್ಸ್ಕಾ ವಿರುದ್ಧ 4-3 ಸೆಟ್‍ಗಳಿಂದ ಗೆಲ್ಲುವ ಮೂಲಕ ಕ್ವಾಟರ್‍ಫೈನಲ್‍ಗೆ ಲಗ್ಗೆ ಇಡುವ ಭರವಸೆ ಮೂಡಿಸಿ ದ್ದಾರೆ.
57 ನಿಮಿಷಗಳ ಕಾಲ ನಡೆದ ರೋಚಕ ಹಣಾಹಣಿಯಲ್ಲಿ ಮೊದಲ ಎರಡು ಸುತ್ತಿನಲ್ಲಿ ಭಾರತದ ಆಟಗಾರ್ತಿ 11-4 , 11-4 ರಿಂದ ಹಿನ್ನೆಡೆ ಅನುಭವಿಸಿದರೂ, ಮೂರನೇ ಸುತ್ತಿನಲ್ಲಿ ಗೆಲುವಿನ ಲಯಕ್ಕೆ ಮರಳಿ 7-11 ರಿಂದ ಮುನ್ನಡೆ ಸಾಧಿಸಿದರೆ, ನಾಲ್ಕನೇ ಸುತ್ತಿನಲ್ಲಿ 10-12ರಿಂದ ಗೆದ್ದ ಮಾಣಿಕಾ ಬಾತ್ರಾ, 6 ಮತ್ತು 7ನೇ ಸುತ್ತಿನಲ್ಲಿ 5-11, 7-11 ರಿಂದ ಗೆಲ್ಲುವ ಮೂಲಕ ಸಂಭ್ರಮಿಸಿದರು.
2ನೆ ಟೇಬಲ್ ಟೆನ್ನಿಸ್ ಶ್ರೇಯಾಂಕಿತ ಹಾಗೂ ವಿಶ್ವದ 38ನೆ ರ್ಯಾಂಕ್‍ನ ಜ್ಞಾನಶೇಖರನ್ ಸಾಥಿಯಾನ್ ಅವರು ವಿಶ್ವದ 95ನೆ ಶ್ರೇಯಾಂಕಿತ ಹಾಂಗ್ ಕಾಂಗ್‍ನ ಲ್ಯಾಮ್ ಸಿಯು ಹ್ಯಾಂಗ್ ವಿರುದ್ಧ ಸೋಲುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ಸಾಥಿಯಾನ್ ಅವರು ಮೊದಲ ಸೆಟ್‍ಅನ್ನು 7-11 ರಿಂದ ಕೇವಲ 7 ನಿಮಿಷದಲ್ಲೇ ಸೋಲು ಕಂಡರು. ಆದರೆ ಎರಡು, ಮೂರು, ನಾಲ್ಕನೇ ಸೆಟ್‍ನಲ್ಲಿ 11-7, 11-4, 11-5 ಸೆಟ್‍ಗಳಿಂದ ಮುನ್ನಡೆ ಸಾಧಿಸುವ ಮೂಲಕ ಭರವಸೆ ಮೂಡಿಸಿದರು.
ಆದರೆ ಹಾಂಗ್ ಕಾಂಗ್ ಆಟಗಾರ ಸಿಯು ಹ್ಯಾಂಗ್ 5ನೆ ಸುತ್ತಿನಿಂದ ಮತ್ತೆ ಲಯ ಕಂಡುಕೊಂಡರು.