Thursday, 12th December 2024

ಸ್ಪೇನ್‌ ಟೆನಿಸಿಗ ಎನ್ರಿಕ್‌ ಲೋಪೆಝ್ ಪೆರೆಝ್’ರಿಗೆ 8 ವರ್ಷಗಳ ನಿಷೇಧ

ಮ್ಯಾಡ್ರಿಡ್‌: ಸ್ಪೇನ್‌ ಟೆನಿಸಿಗ ಎನ್ರಿಕ್‌ ಲೋಪೆಝ್ ಪೆರೆಝ್ ಅವರಿಗೆ 8 ವರ್ಷಗಳ ನಿಷೇಧ ವಿಧಿಸಲಾಗಿದೆ. ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾದದ್ದು ಸಾಬೀತಾಗಿದೆ.

2017ರಲ್ಲಿ 3 ವಿವಿಧ ಮ್ಯಾಚ್‌ ಫಿಕ್ಸಿಂಗ್‌ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು ಎಂಬುದಾಗಿ ಟೆನಿಸ್‌ ಇಂಟೆಗ್ರಿಟಿ ಯುನಿಟ್‌ ತಿಳಿಸಿದೆ. 29 ವರ್ಷದ ಪೆರೆಝ್ 2018ರಲ್ಲಿ ಜೀವನಶ್ರೇಷ್ಠ 154ನೇ ರ್‍ಯಾಂಕಿಂಗ್‌ ಹೊಂದಿದ್ದರು. ಕಳೆದ ವರ್ಷ ಡಬಲ್ಸ್‌ ರ್‍ಯಾಂಕಿಂಗ್‌ನಲ್ಲಿ 135ನೇ ಸ್ಥಾನಿಯಾಗಿದ್ದರು.

ಪೆರೆಝ್ ವಿರುದ್ಧ ಕಠಿನ ಶಿಸ್ತುಕ್ರಮ ತೆಗೆದುಕೊಳ್ಳಲಾಗಿದೆ. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ರಿಚರ್ಡ್‌ ಮೆಕ್‌ಲಾರೆನ್‌ ಇದಕ್ಕೆ ಸಂಬಂಧಿಸಿದ ವಿಚಾರಣೆ ನಡೆಸಿದ್ದರು. 8 ವರ್ಷಗಳ ನಿಷೇಧದ ಜತೆಗೆ 25 ಸಾವಿರ ಡಾಲರ್‌ ದಂಡ ವಿಧಿಸಲಾಗಿದೆ’ ಎಂದು ವರದಿ ಯಲ್ಲಿ ತಿಳಿಸಿದೆ.

ಪೆರೆಝ್ ಒಟ್ಟು 5 ಫಿಕ್ಸಿಂಗ್‌ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿತ್ತು. ಆದರೆ ಕೆಲವೊಂದು ಪ್ರಕರಣಗಳಿಗೆ ಸಂಬಂಧಿಸಿ ದಂತೆ ಸೂಕ್ತ ಸಾಕ್ಷ್ಯಗಳು ದೊರೆಯಲಿಲ್ಲ. ಹೀಗಾಗಿ ಇನ್ನಷ್ಟು ಕಠಿನ ಶಿಕ್ಷೆಯಿಂದ ಪಾರಾದರು.