Saturday, 23rd November 2024

Matthew Wade Retirement: ಆಸೀಸ್‌ ಕ್ರಿಕೆಟಿಗ ಮ್ಯಾಥ್ಯೂ ವೇಡ್‌ ನಿವೃತ್ತಿ ಘೋಷಣೆ

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಹಿರಿಯ ವಿಕೆಟ್‌ ಕೀಪರ್‌ ಮ್ಯಾಥ್ಯೂ ವೇಡ್‌(Matthew Wade) ಅವರು ತಮ್ಮ ಸುದೀರ್ಘ 13 ವರ್ಷಗಳ ಕ್ರಿಕೆಟ್‌ ವೃತ್ತಿ ಜೀವನಕ್ಕೆ ಇಂದು ಇಂದು ನಿವೃತ್ತಿ ಘೋಷಿಸಿದ್ದಾರೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಮಂಡಳಿ (Cricket Australia Board) ಮಂಗಳವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಾದಾರ್ಪಣೆ ಮಾಡಿದ ವೇಡ್‌, ಇದುವರೆಗೂ 36 ಟೆಸ್ಟ್‌, (36 test) 97 ಏಕದಿನ (97 ODI) ಹಾಗೂ 92 ಟಿ20 (92 T20) ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಇದೇ ವರ್ಷದ ಜೂನ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಆಡಿದ್ದರು.

ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು ವೇಡ್‌, ತನ್ನದೇ ತಂಡದ ಕೋಚಿಂಗ್‌ (Coaching) ವಿಭಾಗದ ಭಾಗವಾಗಲಿದ್ದಾರೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ತಿಳಿಸಿದೆ.

ತಾನು ಬಿಗ್‌ ಬ್ಯಾಷ್‌ ಲೀಗ್‌ (Big Bash League) ನಲ್ಲಿ ಆಡುವುದನ್ನು ಮುಂದುವರೆಸುವೆ. ಆದರೆ, ಕೋಚಿಂಗ್‌ ನತ್ತ ಹೆಚ್ಚಿನ ಗಮನ ನೀಡಲಿದ್ದೇನೆ ಎಂದು ಇದೇ ವೇಳೆ ತಿಳಿಸಿದ್ದಾರೆ. ಬಿಗ್‌ ಬ್ಯಾಷ್‌ ಲೀಗಿನ ತಾಸ್ಮಾನಿಯಾ ಹಾಗೂ ಹೋಬರ್ಟ್‌ ಹರಿಕೇನ್ಸ್‌ ತಂಡದ ಪರ ಇನ್ನೆರಡು ಆಡಲಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಾನು ನನ್ನ ಪತ್ನಿ ಹಾಗೂ ಮಕ್ಕಳಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು, ನನ್ನ ಕ್ರಿಕೆಟ್‌ ಗಾಗಿ ಅವರು ತುಂಬಾ ತ್ಯಾಗ ಮಾಡಿದ್ದಾರೆ. ಇದನ್ನು ಹೇಳಲು ಶಬ್ದಗಳೇ ಸಿಗುತ್ತಿಲ್ಲ. ಅವರ ಬೆಂಬಲವಿಲ್ಲದೇ ತಾನು ಕ್ರಿಕೆಟ್‌ ನಲ್ಲಿ ಇಷ್ಟು ವರ್ಷ ಇರಲು ಸಾಧ್ಯವಿರಲಿಲ್ಲ ಎಂದು ಕುಟುಂಬಸ್ಥರಿಗೆ ವೇಡ್ ಧನ್ಯವಾದ ತಿಳಿಸಿದ್ದಾರೆ.‌

ಮುಂಬರುವ ಪಾಕಿಸ್ತಾನ ವಿರುದ್ದದ ಟಿ20 ಸರಣಿಗಾಗಿ, ಆಸೀಸ್‌ ಕೋಚಿಂಗ್‌ ತಂಡದ ಭಾಗವಾಗಲಿದ್ದಾರೆ.

ಕ್ರಿಕೆಟ್‌ ಆಸ್ಟ್ರೇಲಿಯಾ‌ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್‌ ಹಾಕ್ಲೇ, ವೇಡ್‌ ಅವರ ಅದ್ಭುತ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಗ್ರೀನ್, ವೇಡ್‌ ಸ್ಫೋಟಕ ಬ್ಯಾಟಿಂಗ್: ಆಸೀಸ್‌ ಶುಭಾರಂಭ