ಮುಂಬೈ: ಶುಕ್ರವಾರ ಆರಂಭಗೊಂಡ ಭಾರತ ಹಾಗೂ ನ್ಯೂಜಿಲೆಂಡ್ ನಡು ವಣ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತಕ್ಕೆ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಪಂದ್ಯದಲ್ಲಿ ಅಲ್ಪ ಹಿಡಿತ ಸಾಧಿಸುವಂತೆ ಮಾಡಿದ್ದಾರೆ.
ಮೊದಲ ವಿಕೆಟಿಗೆ 80 ರನ್ನುಗಳ ಜತೆಯಾಟ ನೀಡಿ, ಗಿಲ್ ಔಟಾದರು. ಈ ವೇಳೆ ಹಠಾತ್ ಕುಸಿತ ಕಂಡಿತು. ಚೇತೇಶ್ವರ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಒಂದೂ ರನ್ ಗಳಿಸದೆ, ಸ್ಪಿನ್ನರ್ ಪಟೇಲ್‌ಗೆ ಔಟಾದರು. ಕಳೆದ ಪಂದ್ಯದ ಹೀರೋ ಶ್ರೇಯಸ್ ಅಯ್ಯರ್, ಹೆಚ್ಚು ಹೊತ್ತು ನಿಲ್ಲದೆ 18 ಕ್ಕೆ ಪೆವಿಲಿಯನ್ ಮರಳಿದರು. ಬಳೀಕ ಕೀಪರ್ ಸಾಹ, ಅಗರ್ವಾಲ್‌ಗೆ ಉತ್ತಮ ಸಾಥ್ ನೀಡುತ್ತಿದ್ದು, ಭಾರೀ ಮೊತ್ತ ಪೇರಿಸುವ ಜವಾಬ್ದಾರಿ ಇವರ ಮೇಲಿದೆ. ಈಗಾಗಲೇ ಮಯಾಂಕ್ ಅಗರ್ವಾಲ್ ಶತಕ ಗಳಿಸಿ,ಆಟ ಮುಂದುವರಿಸಿದ್ದಾರೆ.
ಕ್ರಿಕೆಟ್ ವಲಯದ 132 ವರ್ಷಗಳ ಇತಿಹಾಸದಲ್ಲಿ ಈ ಟೆಸ್ಟ್ ಸರಣಿ ನಾಲ್ವರು ನಾಯಕರನ್ನು ಕಂಡಿದೆ. ಮೊದಲ ಟೆಸ್ಟ್’ನಲ್ಲಿ ಟೀಂ ಇಂಡಿಯಾ ಪರ ಅಜಿಂಕ್ಯ ರಹಾನೆ ಮತ್ತು ಕಿವೀಸ್ ಪರ ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸಿ ದರೆ, ಎರಡನೇ ಟೆಸ್ಟ್’ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕಿವೀಸ್ ಪರ ಟಾಮ್ ಲಾಥಮ್ ನಾಯಕತ್ವ ವಹಿಸಿದರು.
ಎರಡನೇ ಟೆಸ್ಟ್’ಗೆ ಭಾರತದ ಪರ ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ ಹಾಗೂ ಇಶಾಂತ್ ಶರ್ಮಾ ಹೊರಗುಳಿದು, ವಿರಾಟ್ ಕೊಹ್ಲಿ, ಜಯಂತ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರು.