Friday, 22nd November 2024

ಮಯಾಂಕ್‌ ಔಟ್: ಡ್ರಾದತ್ತ ಮುಖ ಮಾಡಿದ ಟೀಂ ಇಂಡಿಯಾ ?

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿಗಾಗಿ ಹೋರಾಡುತ್ತಿದೆ. ಅಂತಿಮ ಅವಧಿ ಯಲ್ಲಿ ಫಲಿತಾಂಶ ಸಿಗುವ ಆಶಯ ಮೂಡಿದ್ದು, ಭಾರತೀಯ ಬ್ಯಾಟ್ಸ್‌ಮನ್‌ಗಳು ಉತ್ತಮ ಆಟ ಸಂಘಟಿಸುತ್ತಿದ್ದಾರೆ.

ಶುಭಮನ್ ಗಿಲ್(91), ನಾಯಕ ಅಜಿಂಕ್ಯ ರಹಾನೆ(24), ಚೇತೇಶ್ವರ್ ಪೂಜಾರ (56) ಔಟಾದ ಬಳಿಕ ರಿಷಬ್ ಪಂತ್ ರನ್ ಗತಿ ಏರಿಸುತ್ತಿದ್ದಾರೆ. ಭಾರತೀಯ ಬ್ಯಾಟ್ಸ್‌ಮನ್‌ಗಳು ಗೆಲುವಿನ ಆಶಯ ಮೂಡಿಸಿದ್ದಾರೆ.

ಇತ್ತೀಚಿನ ವರದಿ ಪ್ರಕಾರ, ಟೀಂ ಇಂಡಿಯಾ ಐದು ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿತ್ತು. ಗೆಲುವಿಗೆ 53 ರನ್ ಅಗತ್ಯವಿತ್ತು.

ಆರಂಭದಲ್ಲಿ ರೋಹಿತ್ ಶರ್ಮಾ ವಿಕೆಟ್ ಪತನದ ಬಳಿಕ ಚೇತರಿಸಿಕೊಂಡ ಭಾರತ ಉತ್ತಮವಾಗಿ ಕಮ್ ಬ್ಯಾಕ್ ಮಾಡಿತು. ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಶುಭಮನ್ ಗಿಲ್ ಅಮೋಘ 91 ರನ್ ಸಿಡಿಸಿ ನಿರ್ಗಮಿಸಿದರು. ನಾಯಕ ರಹಾನೆ 22 ಎಸೆತಗಳಲ್ಲಿ 24 ರನ್ ಸಿಡಿಸಿ ಔಟಾದರು.

ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೆ ಟ್ರೋಫಿ ಭಾರತದ ಬಳಿಯೇ ಉಳಿದುಕೊಳ್ಳಲಿದೆ. ಏಕೆಂದರೆ, ಭಾರತ ಕಳೆದ ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದಿತ್ತು.