Saturday, 7th September 2024

ಪುರುಷರ ಮ್ಯಾರಥಾನ್: ಚಿನ್ನ ಗೆದ್ದ ಕೀನ್ಯಾದ ಎಲಿಯುಡ್ ಕಿಪ್ಚೋಗೆ

ಟೋಕಿಯೊ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾನುವಾರ ನಡೆದ ಪುರುಷರ ಮ್ಯಾರಥಾನ್ ಓಟದಲ್ಲಿ 2 ಗಂಟೆ 08 ನಿಮಿಷ 38 ಸೆಕೆಂಡುಗಳಲ್ಲಿ ಗುರಿ ತಲುಪಿದ ಕೀನ್ಯಾದ ವಿಶ್ವ ದಾಖಲೆ ವೀರ ಎಲಿಯುಡ್ ಕಿಪ್ಚೋಗೆ ಚಿನ್ನವನ್ನು ಗೆದ್ದುಕೊಂಡರು ಈ ಸಾಧನೆಯು ಮೂಲಕ ಮ್ಯಾರಥಾನ್ ನ ಅದ್ವಿತೀಯ ರಾಜನಾಗಿ ಹೊರಹೊಮ್ಮಿದರು.

ಸತತ ಮ್ಯಾರಥಾನ್ ಪ್ರಶಸ್ತಿಗಳನ್ನು ಗೆದ್ದ ಮೂರನೇ ಓಟಗಾರನೆಂಬ ಕೀರ್ತಿಗೆ ಭಾಜನರಾದರು. ಟೋಕಿಯೊ ಕ್ರೀಡಾಕೂಟದ ಅಥ್ಲೆಟಿಕ್ಸ್ ಕಾರ್ಯಕ್ರಮದ ಅಂತಿಮ ಸ್ಪರ್ಧೆಯಲ್ಲಿ ನೆದರ್ಲೆಂಡ್ಸ್ ನ ಅಬ್ದಿ ನಗೆಯೆ 2: 09.58 ರಲ್ಲಿ ಗುರಿ ತಲುಪುವುದರೊಂದಿಗೆ ಬೆಳ್ಳಿ ಪಡೆದರು. ಬೆಲ್ಜಿಯಂನ ಬಶೀರ್ ಅಬ್ದಿ ಮೂರನೇ ಸ್ಥಾನ ಪಡೆದರು. 36 ರ ಹರೆಯದ ಕಿಪ್ಚೊಗೆ 2013 ರಿಂದ ಅವರು ಭಾಗವಹಿಸಿದ 15 ಮ್ಯಾರಥಾನ್ ಗಳಲ್ಲಿ 13 ನೇ ಗೆಲುವು ಪಡೆದರು.

Leave a Reply

Your email address will not be published. Required fields are marked *

error: Content is protected !!