Sunday, 15th December 2024

ಸಿಎಸ್‌ಕೆಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ !

ಮುಂಬೈ: ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್  ವಾಂಖೆಡೆ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ. ಸಿಎಸ್‌ಕೆಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿ ಪರಿಣಮಿಸಿದೆ.

ಧೋನಿ ಪಡೆ ಈ ಪಂದ್ಯದಲ್ಲಿ ಸೋತರೆ ಎರಡನೇ ತಂಡವಾಗಿ ಟೂರ್ನಿಯಿಂದ ನಿರ್ಗಮಿಸಲಿದೆ.

ಸ್ಟಾರ್ ಆಟಗಾರರಾದ ಸೂರ್ಯಕುಮಾರ್ ಯಾದವ್ ಮತ್ತು ರವೀಂದ್ರ ಜಡೇಜಾ ಇಬ್ಬರೂ ಗಾಯದ ಕಾರಣ ಐಪಿಎಲ್‌ ನಿಂದಲೇ ಹೊರಬಿದ್ದಿದ್ದಾರೆ ಎಂಬುದು ಗಮನಾರ್ಹ. ಮುಂಬೈಗೆ ಹೋಲಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ ಪ್ರದರ್ಶನ ಕೊಂಚ ಪರವಾಗಿಲ್ಲ.

ಸಿಎಸ್ಕೆ ಆಡಿದ 11 ರಲ್ಲಿ 4 ಗೆಲುವುಗಳನ್ನು ಪಡೆದಿದೆ. ಜಡೇಜಾ ನೇತೃತ್ವದಲ್ಲಿ ಆಡಿದ ಆರಂಭಿಕ 8 ಪಂದ್ಯಗಳಲ್ಲಿ 2 ರಲ್ಲಿ ಮಾತ್ರ ಗೆದ್ದು 6 ರಲ್ಲಿ ಸೋತಾಗ CSK ನ ಪ್ಲೇಆಫ್ ಆಸೆ ಬಹುತೇಕ ಕಮರಿತ್ತು. ಆದರೆ ಧೋನಿ ಹಿಂದಿರುಗಿದ ನಂತರ ಆಡಿದ 3 ಪಂದ್ಯ ಗಳಲ್ಲಿ 2 ಅನ್ನು ಗೆದ್ದಿರುವ CSK, ಪ್ಲೇಆಫ್‌ಗೆ ಪ್ರವೇಶಿಸುವ ಕ್ಷೀಣ ಅವಕಾಶ ಹೊಂದಿದೆ. ಇದಕ್ಕಾಗಿ, ಸಿಎಸ್‌ಕೆ ಉಳಿದ 3 ಪಂದ್ಯ ಗಳನ್ನು ಗೆಲ್ಲುವುದರ ಜೊತೆಗೆ, ಇತರ ಪಂದ್ಯಗಳ ಫಲಿತಾಂಶವು ಅದಕ್ಕೆ ಪೂರಕ ವಾಗಿರಬೇಕು.

ಸಿಎಸ್ಕೆ ಆರಂಭಿಕರಾದ ಡ್ವೇನ್ ಕಾನ್ವೇ ಮತ್ತು ರುತುರಾಜ್ ಗಾಯಕ್ವಾಡ್ ಉತ್ತಮ ಆರಂಭ ನೀಡುತ್ತಿದ್ದಾರೆ. ಕಾನ್ವೆ ಸತತ ಮೂರು ಅರ್ಧಶತಕಗಳ ಮೂಲಕ ತಂಡಕ್ಕೆ ಹೊಸ ಹಾದಿ ಸೃಷ್ಟಿಸಿದ್ದಾರೆ. ಮೊಯಿನ್ ಅಲಿ ಫಾರ್ಮ್‌ಗೆ ಮರಳಿದ್ದಾರೆ. ಯುವ ಬೌಲರ್‌ ಗಳಾದ ಮುಖೇಶ್ ಚೌಧರಿ, ಸಿಮ್ರಂಜಿತ್ ಸಿಂಗ್ ಮತ್ತು ಶ್ರೀಲಂಕಾದ ಮಹೇಶ್ ಆಕ್ರಮಣ ಕಾರಿ ದಾಳಿ ಸಂಘಟಿಸಿದರೆ, ಚೆನ್ನೈ ಮೇಲುಗೈ ನಿರೀಕ್ಷಿಸಬಹುದು. ಧೋನಿ ತಮ್ಮ ಪಾತ್ರ ವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಕಿರನ್ ಪೊಲಾರ್ಡ್ ಅವರಂತಹ ಆಟಗಾರರ ಫಾರ್ಮ್‌ ಕೊರತೆಯಿಂದಾಗಿ ಮುಂಬೈ ತಂಡವು ಪರದಾಡುತ್ತಿದೆ. ಕಳೆದ ಪಂದ್ಯದಲ್ಲಿ ಮುಂಬೈ ತಂಡವನ್ನು ಕೆಕೆಆರ್ 5 ವಿಕೆಟ್‌ಗಳಿಂದ ಸೋಲಿಸಿತ್ತು. ಮುಂಬೈ ತಂಡವು ಚೆನ್ನೈ ವಿರುದ್ಧ ಒಟ್ಟಾರೆ ಮುನ್ನಡೆ ಸಾಧಿಸಿದ್ದನ್ನು ಗಮನಿಸಬಹುದಾಗಿದ್ದು ಪಂದ್ಯ ಕುತೂಹಲ ಕೆರಳಿಸಿದೆ.