Friday, 22nd November 2024

49 ಕೆಜಿ ವೇಟ್‌ಲಿಫ್ಟಿಂಗ್‌: ಮೀರಾಬಾಯಿ ಚಾನು ದಾಖಲೆ

ಟೋಕಿಯೊ: ಟೋಕಿಯೊ  ಒಲಂಪಿಕ್ಸ್ ನಲ್ಲಿ ಭಾರತದ ಮೀರಾಬಾಯಿ ಚಾನು ದಾಖಲೆ ಬರೆದಿದ್ದಾರೆ. ಮೀರಾಬಾಯಿ 49 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಮೀರಾಬಾಯಿ ಚಾನು ಸ್ನ್ಯಾಚ್‌ನಲ್ಲಿ 87 ಕೆಜಿ ಎತ್ತಿದರೆ, ಕ್ಲೀನ್ ಮತ್ತು ಜರ್ಕ್ನಲ್ಲಿ 115 ಕೆಜಿ ಎತ್ತಿದ್ದಾರೆ. ಇದರೊಂದಿಗೆ ಒಟ್ಟು 202 ಕೆ.ಜಿ.ಗಳನ್ನು ಎತ್ತಿದರು. ಚಾನುಗೆ ಮೊದಲು, ಸಿಡ್ನಿ ಒಲಿಂಪಿಕ್ಸ್ 2000ರಲ್ಲಿ ಕರ್ಣಂ ಮಲ್ಲೇಶ್ವರಿ, ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಆ ಸಮಯದಲ್ಲಿ ಕರ್ಣಂ ಮಲ್ಲೇಶ್ವರಿ ಒಟ್ಟು 240 ಕೆ.ಜಿ. ಎತ್ತಿದ್ದರು.

ಇನ್ನೊಂದೆಡೆ ಬಿಲ್ಲುಗಾರಿಕೆಯ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ, ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾಧವ್ ಜೋಡಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರ ಬಿದ್ದಿದ್ದಾರೆ. ದಕ್ಷಿಣ ಕೊರಿಯಾದ ಆನ್ ಸ್ಯಾನ್ ಮತ್ತು ಕಿಮ್ ಜೆ ಡಿಯೋಕ್ 6-2ರಿಂದ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರು.