Thursday, 19th September 2024

ಪ್ಯಾರಾ ಶೂಟಿಂಗ್: ಚಿನ್ನ ಗೆದ್ದ ಲೆಖರಾಗೆ ಮೋದಿ ಅಭಿನಂದನೆ

ನವದೆಹಲಿ : ಫ್ರಾನ್ಸ್‌ನ ಚಟೌರೊಕ್ಸ್‌ನಲ್ಲಿ ನಡೆದ ಪ್ಯಾರಾ ಶೂಟಿಂಗ್ ವಿಶ್ವಕಪ್‌ ನಲ್ಲಿ ವಿಶ್ವ ದಾಖಲೆಯ ಸ್ಕೋರ್‌ನೊಂದಿಗೆ ಚಿನ್ನ ಗೆದ್ದ ಲೆಖರಾಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.

ಬುಧವಾರ ಫ್ರಾನ್ಸ್‌ನ ಚಟೌರೊಕ್ಸ್‌ನಲ್ಲಿ ನಡೆದ ಪ್ಯಾರಾ ಶೂಟಿಂಗ್ ವಿಶ್ವಕಪ್‌ ನಲ್ಲಿ 250.6 ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ನಲ್ಲಿ ಲೆಖರಾ ವಿಶ್ವ ದಾಖಲೆಯ ಸ್ಕೋರ್‌ನೊಂದಿಗೆ ಚಿನ್ನ ಗೆದ್ದಿದ್ದಾರೆ. ಲೆಖರಾ 2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ತನ್ನದೇ ಆದ 249.6 ರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

ನೀವು ಯಶಸ್ಸಿನ ಹೊಸ ಎತ್ತರಕ್ಕೆ ಏರುತ್ತಿರಲಿ ಮತ್ತು ಇತರರಿಗೆ ಸ್ಫೂರ್ತಿ ನೀಡುತ್ತಿರಲಿ. ನನ್ನ ಶುಭಾಶಯಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಶೂಟರ್ ಶ್ರೀಹರ್ಷ ದೇವರಡ್ಡಿ ತಮ್ಮ ವಿಭಾಗದಲ್ಲಿ ಚಿನ್ನ ಗೆದ್ದಿರುವುದಕ್ಕೆ ಮೋದಿ ಸಂತಸ ವ್ಯಕ್ತಪಡಿಸಿದ್ದು, ಚಿನ್ನ ಗೆದ್ದಿದ್ದಕ್ಕಾಗಿ ಹೆಮ್ಮೆ ಪಡುತ್ತೇನೆ. ಅವರ ದೃಢಸಂಕಲ್ಪ ನಿಜವಾಗಿಯೂ ಪ್ರೇರಕವಾಗಿದೆ. ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು ಎಂದು ಮತ್ತೊಂದು ಟ್ವೀಟ್​​ನಲ್ಲಿ ಅಭಿನಂದಿಸಿದ್ದಾರೆ.

ಶ್ರೀಹರ್ಷ ದೇವರಡ್ಡಿಯವರಿಗೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿಯವರು ಶುಭಾಯಶ ತಿಳಿಸಿದ್ದಾರೆ. ಚಿನ್ನ ಗೆದ್ದಿದ್ದಕ್ಕಾಗಿ ಕರ್ನಾಟಕದ ನಮ್ಮವರೇ ಆದ ಶ್ರೀಹರ್ಷ ದೇವರಡ್ಡಿ ಅವರಿಗೆ ಅಭಿನಂದನೆಗಳು. ಅವರು ನಮ್ಮ ಯುವ ಕ್ರೀಡಾ ಪಟುಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಟ್ವಿಟ್ ಮಾಡುವ ಮೂಲಕ ಅಭಿನಂದಿಸಿದ್ದಾರೆ.