Thursday, 14th November 2024

Mohammed Shami: ಶಮಿ ಸಂಪೂರ್ಣ ಫಿಟ್‌; ಮಧ್ಯಪ್ರದೇಶ ವಿರುದ್ಧ ಕಣಕ್ಕೆ

ಕೋಲ್ಕತ್ತಾ: ಶಸ್ತ್ರಚಿಕಿತ್ಸೆ ಬಳಿಕ ಸುದೀರ್ಘ ವಿಶ್ರಾಂತಿಯಲ್ಲಿದ್ದ ಟೀಮ್‌ ಇಂಡಿಯಾ ವೇಗಿ ಮೊಹಮ್ಮದ್‌ ಶಮಿ(Mohammed Shami) ಕ್ರಿಕೆಟ್‌ ಪುನರಾಗಮನ ಕಾಲ ಸನ್ನಿಹಿತವಾದಂತಿದೆ. ಹಲವು ಬಾರಿ ದೇಶೀಯ ಕ್ರಿಕೆಟ್‌ ಆಡಲು ಮುಂದಾಗಿ ಕೊನೆಯ ಗಳಿಗೆಯಲ್ಲಿ ಫಿಟ್‌ ಇಲ್ಲದೆ ಹಿಂದೆ ಸರಿಯುತ್ತಿದ್ದ ಶಮಿ ನಾಳೆಯಿಂದ ಆರಂಭವಾಗಲಿರುವ ರಣಜಿ ಟ್ರೋಫಿಯ(Ranji Trophy) ಗ್ರೂಪ್-ಸಿ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ ಶಮಿ ಸರಿ ಸುಮಾರು ಒಂದು ವರ್ಷದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳುತ್ತಿರುವ ಸಿದ್ಧತೆಯಲ್ಲಿದ್ದಾರೆ.

ಶಮಿ ಪೂರ್ಣ ಫಿಟ್ ಆಗಿ ಈ ಹಿಂದೆಯೇ ರಣಜಿ ಆಡುತ್ತಿದ್ದರೆ ಅವರನ್ನು ನವೆಂಬರ್‌ 22 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗಾವಸ್ಕರ್ ಟ್ರೋಫಿಯ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗುತ್ತಿತ್ತು. ಇದೀಗ ದೇಶೀಯ ಕ್ರಿಕೆಟ್‌ನಲ್ಲಿ ಒಂದೆರಡು ಪಂದ್ಯ ಆಡಿ ತಮ್ಮ ಫಿಟ್‌ನೆಸ್‌ ಸಾಮರ್ಥ್ಯ ತೋರ್ಪಡಿಸಿದರೆ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ ವೇಳೆಗೆ ಶಮಿಯನ್ನು ಟೀಮ್‌ ಇಂಡಿಯಾಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಯೂ ಇದೆ.

https://twitter.com/imrajitd/status/1856259089786957884

ಇದನ್ನೂ ಓದಿ IND vs PAK: ಪಾಕಿಸ್ತಾನಕ್ಕೆ ಏಕೆ ಬರುವುದಿಲ್ಲ ಎಂಬ ಅಭಿಮಾನಿ ಪ್ರಶ್ನೆಗೆ ಉತ್ತರಿಸಿದ ಸೂರ್ಯಕುಮಾರ್‌

ಬೆಂಗಳೂರಿನಲ್ಲಿ ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್‌ ನಡುವಣ ಮೊದಲ ಟೆಸ್ಟ್ ಪಂದ್ಯದ ಬಳಿಕ ಸಹಾಯಕ ಕೋಚ್ ಅಭಿಷೇಕ್ ನಾಯರ್‌, ಶುಭಮನ್‌ ಗಿಲ್‌ಗೆ ನೆಟ್ಸ್‌ನಲ್ಲಿ ಶಮಿ ಬೌಲಿಂಗ್ ಮಾಡಿದ್ದರು. ಹೀಗಾಗಿ ಶಮಿ ಶೀಘ್ರದಲ್ಲೇ ಕ್ರಿಕೆಟ್‌ಗೆ ಮರಳಲಿದ್ದಾರೆ ಎನ್ನಲಾಗಿತ್ತು. ಕರ್ನಾಟಕದದ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರೆ ಎನ್ನಲಾಗಿತ್ತು. ಆದರೆ ಕಣಕ್ಕಿಳಿದಿರಲಿಲ್ಲ. ಪಾದದ ಗಾಯದ ಶಸಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿರುವ ಶಮಿ 2023ರ ನವೆಂಬರ್‌ನಿಂದ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದಾರೆ.

2023 ಏಕದಿನ ವಿಶ್ವಕಪ್‌ ಫೈನಲ್‌ ಶಮಿಯ ಕೊನೆಯ ಪಂದ್ಯವಾಗಿತ್ತು. ಇದಾದ ಬಳಿಕ ಅವರು ಲಂಡನ್‌ನಲ್ಲಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು.  ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.