Thursday, 12th December 2024

ಬೆಂಗಳೂರಿನಲ್ಲಿ ಎಂಎಸ್ ಧೋನಿ ಕ್ರಿಕೆಟ್ ಅಕಾಡೆಮಿ: ನವೆಂಬರ್ 7ರಿಂದ ತರಬೇತಿ ಆರಂಭ

ಬೆಂಗಳೂರು: ಟೀಂ ಇಂಡಿಯಾದ ಮಾಜಿ ನಾಯಕ ಕ್ಯಾ.ಕೂಲ್ ಮಹೇಂದ್ರ ಸಿಂಗ್ ಧೋನಿ ಅವರ ಕ್ರಿಕೆಟ್ ಅಕಾಡೆಮಿಯನ್ನು ಬೆಂಗಳೂರಿನಲ್ಲಿ ಆರಂಭಿಸ ಲಾಗಿದೆ.

ಬಿದರಹಳ್ಳಿ ಹೋಬಳಿಯ ಕಾಡ ಅಗ್ರಹಾರದಲ್ಲಿ ಗೇಮ್‌ಪ್ಲೇ ಮತ್ತು ಆರ್ಕಾ ಸ್ಪೋರ್ಟ್ಸ್ ಕಂಪನಿಗಳ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಅಕಾಡೆಮಿಗೆ ಆಟಗಾರರ ನೋಂದಣಿ ಪ್ರಕ್ರಿಯೆ ಆರಂಭ ಗೊಂಡಿದೆ. ನವೆಂಬರ್ 7ರಿಂದ ತರಬೇತಿ ಪ್ರಕ್ರಿಯೆ ಶುರುವಾಗಲಿದೆ.

‘ಅತ್ಯುತ್ತಮ ತಾಂತ್ರಿಕತೆ ಮತ್ತು ತಂತ್ರಜ್ಞಾನದೊಂದಿಗೆ 360 ಡಿಗ್ರಿ ತರಬೇತಿ ಒದಗಿಸುವುದು ನಮ್ಮ ಧ್ಯೇಯ ವಾಗಿದೆ. ಗುಣಮಟ್ಟದ ಕೋಚ್ ಮತ್ತು ಫಿಟ್ನೆಸ್ ತಜ್ಞರು ಇರಲಿದ್ದಾರೆ. ಕ್ರಿಕೆಟರ್‌ ಗಳನ್ನು ರೂಪಿಸುವುದಷ್ಟೇ ನಮ್ಮ ಉದ್ದೇಶವಲ್ಲ. ಸ್ಮಾರ್ಟ್ ಕ್ರಿಕೆಟರ್‌ಗಳನ್ನು ಸಿದ್ಧಪಡಿಸಲಿದ್ದೇವೆ ಎಂದು ಧೋನಿ ಅಕಾಡೆಮಿಗೆ ವರ್ಚುವಲ್ ಮೂಲಕ ಚಾಲನೆ ನೀಡುವ ವೇಳೆ ಹೇಳಿದ್ದಾರೆ.

6 ವರ್ಷಗಳ ಹಿಂದೆ ಆರಂಭಗೊಂಡಿರುವ ಎಂಎಸ್ ಧೋನಿ ಕ್ರಿಕೆಟ್ ಅಕಾಡೆಮಿ ಭಾರತದೆಲ್ಲೆಡೆ 50ಕ್ಕೂ ಅಧಿಕ ನಗರಗಳಲ್ಲಿ ಕೇಂದ್ರಗಳನ್ನು ಹೊಂದಿದೆ. ವಿದೇಶದಲ್ಲೂ 3 ಕೇಂದ್ರಗಳಿವೆ.