Monday, 14th October 2024

ಅಂದು ಧೋನಿ ತೋರಿದ ವರ್ತನೆಯಿಂದ ತಂಡದ ಮೀಟಿಂಗ್ ಕೂಡ ನಡೆಯಲಿಲ್ಲ; ಯಾವುದು ಆ ಘಟನೆ?

MS Dhoni

ಚೆನ್ನೈ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್‌ ಧೋನಿ(MS Dhoni) ಕ್ರಿಕೆಟ್‌ ಮೈದಾನದಲ್ಲಿ ಶಾಂತಿಯಿಂದ ವ‌ರ್ತಿಸುತ್ತಾರೆ. ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತ ಅವರ ಮುಖ್ಯ ಗುಣ. ಎಂತಹ ಸನ್ನಿವೇಶವಿದ್ದರೂ ಧೋನಿ(Dhoni) ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದಕ್ಕಾಗಿ ಅವರಿಗೆ ಕ್ಯಾಪ್ಟನ್‌ ಕೂಲ್‌’ ಎಂಬ ಹೆಸರು ಕೂಡ ಇದೆ. ಆದರೆ 2008ರ ಐಪಿಎಲ್‌ ಆವೃತ್ತಿಯ ವೇಳೆ ಧೋನಿ ಅವರು ಡ್ರೆಸ್ಸಿಂಗ್‌ ರೂಮ್‌ನಲ್ಲಿ ’ ಆ್ಯಂಗ್ರಿಮ್ಯಾನ್‌’ ಆಗಿ ಬದಲಾಗಿದ್ದರಂತೆ(MS Dhoni lost his cool). ಅವರ ಕೋಪವನ್ನು ಕಂಡು ಇಡೀ ತಂಡವೇ ಭಯಗೊಂಡಿತ್ತು ಎಂದು ಮಾಜಿ ಸಿಎಸ್‌ಕೆ ಆಟಗಾರ ಸುಬ್ರಹ್ಮಣ್ಯಮ್ ಬದ್ರಿನಾಥ್(Subramaniam Badrinath) ಸಂದರ್ಶನವೊಂದರಲ್ಲಿ ಮೆಲುಕು ಹಾಕಿದ್ದಾರೆ.

ಇನ್ಸೈಡ್‌ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬದ್ರಿನಾಥ್, 2008ರ ಐಪಿಎಲ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಚೆನ್ನೈನಲ್ಲಿ ನಡೆದ ಪಂದದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 8 ವಿಕೆಟ್ ನಷ್ಟಕ್ಕೆ 126 ರನ್​ ಗಳಿಸಿತ್ತು. ಬೆಂಗಳೂರು ನೀಡಿದ ಈ ಸಣ್ಣ ಮೊತ್ತವನ್ನು ಬೆನ್ನಟ್ಟಿದ ನಮ್ಮ(ಚೆನ್ನೈ) ತಂಡ ನಾಟಕೀಯ ಕುಸಿತ ಕಂಡು ಸೋಲು ಕಂಡಿತ್ತು. ಈ ಸೋಲಿನ ಹತಾಶರಾದ ಧೋನಿ ತಾಳ್ಮೆ ಕಳೆದುಕೊಂಡರು. ಧೋನಿ ಈ ರೀತಿ ವರ್ತಿಸಿದ್ದು ಇದೇ ಮೊದಲ ಬಾರಿಯಾಗಿದ್ದರಿಂದ ತಂಡದ ಎಲ್ಲ ಸದಸ್ಯರು ಭಯಭೀತರಾಗಿದ್ದರು ಎಂದು ಬದ್ರಿನಾಥ್ ವಿವರಿಸಿದರು.

ಇದನ್ನೂ ಓದಿ Dhruv Jurel : ಧೋನಿ ದಾಖಲೆ ಸರಿಗಟ್ಟಿದ ಯುವ ವಿಕೆಟ್‌ಕೀಪರ್‌ ಧ್ರುವ್‌ ಜುರೆಲ್‌

ತಂಡ 111 ರನ್​ ಗಳಿಸಿ 8 ವಿಕೆಟ್​ ಕಳೆದುಕೊಂಡಿತ್ತು. ಈ ವೇಳೆ ನಾನು(ಬದ್ರಿನಾಥ್ ) ಅನಿಲ್​ ಕುಂಬ್ಳೆ ಅವರ ಬೌಲಿಂಗ್​ನಲ್ಲಿ ಕೇವಲ ಒಂದು ರನ್​ ಗಳಿಸಿ ಎಲ್‌ಬಿಡಬ್ಲ್ಯು ಆಗಿ ಡ್ರಸ್ಸಿಂಗ್‌ ರೂಮ್‌ಗೆ ಬಂದೆ. ಡಗೌಟ್‌ನಲ್ಲಿದ್ದ ಧೋನಿ ನೇರವಾಗಿ ಡ್ರೆಸ್ಸಿಂಗ್‌ ರೂಮ್‌ಗೆ ಬಂದು ಇಲ್ಲಿದ್ದ ನೀರಿನ ಬಾಟಲ್‌ ಅನ್ನು ಜೋರಾಗಿ ಇದ್ದು ತಮ್ಮ ಕೋಪವನ್ನು ಹೊರಹಾಕಿದರು. ಶಾಂತ ರೀತಿಯ ಧೋನಿಯನ್ನು ಈ ರೀತಿ ಕಂಡು ಉಳಿದ ಕ್ರಿಕೆಟಿಗರು ಹಾಗೂ ನಾನು, ಮಾಹಿಯನ್ನು ಮಾತನಾಡಿಸಲು ಹೆದರಿದೆವು. ಇಡೀ ದಿನ ನಾವು ಯಾರು ಕೂಡ ಧೋನಿಯನ್ನು ಮಾತನಾಡಿಸುವ ಧೈರ್ಯ ಮಾಡಲಿಲ್ಲ. ಅವರು ಕೂಡ ಯಾರನ್ನು ಮಾತನಾಡಿಸಲಿಲ್ಲ. ಅಂದು ತಂಡದ ಮೀಟಿಂಗ್ ಕೂಡ ನಡೆಯಲಿಲ್ಲ ಎಂದು ಬದ್ರಿನಾಥ್ ಅಂದಿನ ಘಟನೆಯನ್ನು ಮತ್ತೆ ನೆನಪು ಮಾಡಿಕೊಂಡರು.