ಚೆನ್ನೈ: ಟೀಂ ಇಂಡಿಯಾದ ಕ್ಯಾಪ್ಟನ್ ಕೂಲ್, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ 14ನೇ ಆವೃತ್ತಿಯ ಐಪಿಎಲ್ಗೆ ಮಾ.9 ರಿಂದ ಅಭ್ಯಾಸ ಆರಂಭಿಸಲಿದೆ ಎನ್ನಲಾಗಿದೆ.
ಎಂಎಸ್ ಧೋನಿ, ಚೆನ್ನೈಗೆ ಆಗಮಿಸಿದ್ದು, 5 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಲಿದ್ದಾರೆ. ಅಂಬಟಿ ರಾಯುಡು ಕೂಡ ಚೆನ್ನೈಗೆ ಆಗಮಿಸಿದ್ದು, ಸ್ಥಳೀಯ ಆಟಗಾರರು ಬಳಿಕ ತಂಡ ಕೂಡಿಕೊಳ್ಳಲಿದ್ದಾರೆ.
ಮಾ.9ರಿಂದ ತರಬೇತಿ ಶಿಬಿರ ಆರಂಭಗೊಳ್ಳಬಹುದು. ಎಲ್ಲ ಆಟಗಾರರು 5 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಲಿದ್ದು, ಮೂರು ಬಾರಿ ಕೋವಿಡ್-19 ವರದಿ ನೆಗೆಟಿವ್ ಬಂದ ನಂತರ ತರಬೇತಿ ಆರಂಭಿಸಲಿದ್ದಾರೆ ಎಂದರು.
ಕನ್ನಡಿಗ ಕೆ.ಗೌತಮ್ ಅವರನ್ನು ಸಿಎಸ್ಕೆ ಫ್ರಾಂಚೈಸಿ 9.25 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಇಂಗ್ಲೆಂಡ್ ಆಲ್ರೌಂಡರ್ ಮೊಯಿನ್ ಅಲಿ (7 ಕೋಟಿ ರೂ.), ಚೇತೇಶ್ವರ್ ಪೂಜಾರ (50 ಲಕ್ಷ ರೂ.) ಕೂಡ ಹೊಸದಾಗಿ ಸಿಎಸ್ಕೆ ಸೇರಿದ್ದಾರೆ.