ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ತಂಡ ಗೆದ್ದರೆ ಪ್ಲೇ ಆಫ್‌ಗೆ ಅರ್ಹತೆ ಪಡೆದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಲಕ್ನೋ ಸೂಪರ್ ಜೈಂಟ್ಸ್ ಗೆದ್ದಲ್ಲಿ ಪ್ಲೇ ಆಫ್‌ಗೆ ಪ್ರವೇಶಕ್ಕೆ ಒಂದು ಹೆಜ್ಜೆ ಬಾಕಿ ಇರುತ್ತದೆ.
ಸೋಮವಾರದ ಪಂದ್ಯದಲ್ಲಿ ಗೆದ್ದ ಗುಜರಾತ್ ಟೈಟಾನ್ಸ್ ಪ್ಲೇಆಫ್ ಪ್ರವೇಶ ಪಡೆದು ಕೊಂಡಿದೆ. ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಲೀಗ್ನಿಂದ ಹೊರಬಿದ್ದಿವೆ. ಇಂದಿನ ಲಕ್ನೋ ಮುಂಬೈ ಪಂದ್ಯವೂ ಸಹ ಉಭಯ ತಂಡಗಳಿಗೆ ಮಹತ್ವದ್ದಾಗಿದೆ.
ಮುಂಬೈ ಇಂಡಿಯನ್ಸ್ ದಿನ ಪಂದ್ಯವನ್ನು ಗೆದ್ದ ನಂತರ, ಅವರು 16 ಅಂಕಗಳನ್ನು ಹೊಂದಿರುತ್ತಾರೆ ಮತ್ತು ಅವರು ಪ್ಲೇ-ಆಫ್‌ಗೆ ಅರ್ಹತೆ ಪಡೆದ ಎರಡನೇ ತಂಡವಾಗಲಿ ದ್ದಾರೆ.
ಮುಂಬೈ ಕಳೆದೆರಡು ಪಂದ್ಯದಲ್ಲಿ ಬೃಹತ್ ಸ್ಕೋರ್ನ್ನ ಉತ್ತಮವಾಗಿ ಬೆನ್ನು ಹತ್ತಿದೆ. ಮುಂಬೈಗೆ ಸೂರ್ಯ ಕುಮಾರ್ ಯಾದವ್ ಕಳೆದೆರಡು ಪಂದ್ಯದಿಂದ ಆಸರೆಯಾಗಿದ್ದು, ಆಂಭದಲ್ಲಿ ಪ್ಲೇ ಸತತ ಸೋಲು ಕಂಡಿದ್ದ ತಂಡ ಪ್ಲೇ ಆಫ್ ಪ್ರವೇಶಕ್ಕೆ ಒಂದು ಗೆಲುವನ್ನು ಎದುರು ನೋಡುತ್ತಿದೆ.
ಸಂಭಾವ್ಯ ತಂಡ: ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಕ್ರಿಸ್ ಜೋರ್ಡಾನ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಾಲ್, ಜೇಸನ್ ಬೆಹ್ರೆಂಡಾರ್ಫ್
ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೈಲ್ ಮೇಯರ್ಸ್, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ (ನಾಯಕ), ಆಯುಷ್ ಬಡೋನಿ, ಕೆ ಗೌತಮ್, ಯುಧ್ವೀರ್ ಚರಕ್/ಯಶ್ ಠಾಕೂರ್, ರವಿ ಬಿಷ್ಣೋಯ್, ಅಮಿತ್ ಮಿಶ್ರಾ, ಅವೇಶ್ ಖಾನ್.