Wednesday, 23rd October 2024

Gautam Gambhir : ಕೊಹ್ಲಿ ಬಗ್ಗೆ ನನ್ನ ಆಲೋಚನೆಗಳು ಯಾವಾಗಲೂ ಸ್ಪಷ್ಟ: ಗೌತಮ್ ಗಂಭೀರ್

Gautam Gambhir

ಬೆಂಗಳೂರು: 2024ರಲ್ಲಿ ಸುದೀರ್ಘ ಸ್ವರೂಪದಲ್ಲಿ ಭಾರತದ ತಂಡದ ಫಾರ್ಮ್ ಬಗ್ಗೆ ಯಾವುದೇ ಸಂದೇಹವಿಲ್ಲ. ಅವರು ವರ್ಷದಲ್ಲಿ ಎಂಟು ಟೆಸ್ಟ್ ಗಳಲ್ಲಿ ಏಳನ್ನು ಗೆದ್ದಿದ್ದಾರೆ. ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ತವರು ಸರಣಿಗೆ ಬಂದಾಗ ಗೆಲುವಿನ ಸಂಖ್ಯೆಯನ್ನು ಹೆಚ್ಚಿಸಲು ಸಜ್ಜಾಗಿದ್ದಾರೆ. ಆದಾಗ್ಯೂ ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ಫಾರ್ಮ್ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಜುಲೈ 2023ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೆಡ್-ಬಾಲ್ ಶತಕದ ನಂತರ ಅವರು ಎಂಟು ಇನ್ನಿಂಗ್ಸ್‌ಗಳಲ್ಲಿ 50 ರನ್‌ಗಳ ಗಡಿ ದಾಟಿಲ್ಲ. ಆದರೆ ಗೌತಮ್ ಗಂಭೀರ್ (Gautam Gambhir) ಅವರ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಇದೇ ವಿಷಯದ ಬಗ್ಗೆ ಮಾತನಾಡಿದ್ದಾರೆ. ಕೊಹ್ಲಿಯನ್ನು ವಿಶ್ವ ದರ್ಜೆಯ ಕ್ರಿಕೆಟಿಗ ಎಂದು ಹೇಳಿದ ಅವರು, ಸರಣಿಯಲ್ಲಿ ಬ್ಯಾಟಿಂಗ್ ವಿಚಾರಕ್ಕೆ ರನ್ ಗಳಿಸುವ ಅತಿಯಾದ ಹಂಬಲವು ಕೊಹ್ಲಿಗೆ ಉತ್ತಮ ಎಂದು ಹೇಳಿದರು.

ವಿರಾಟ್ ಬಗ್ಗೆ ನನ್ನ ಆಲೋಚನೆಗಳು ಯಾವಾಗಲೂ ಸ್ಪಷ್ಟ. ಅವರು ವಿಶ್ವ ದರ್ಜೆಯ ಕ್ರಿಕೆಟಿಗ. ಅವರು ಇಷ್ಟು ದೀರ್ಘಕಾಲದವರೆಗೆ ಪ್ರದರ್ಶನ ನೀಡಿದ್ದಾರೆ. ಅವರು ಪಾದಾರ್ಪಣೆ ಮಾಡಿದಾಗ ಇದ್ದಂತೆಯೇ ರನ್‌ಗಾಗಿ ಹಸಿಯುತ್ತಿದ್ದಾರೆ. ಇಲ್ಲಿಯವರೆಗೆ, ಅವರ ಹಸಿವು ಮುಂದುವರಿದಿದೆ. ಆ ಹಸಿವು ಅವರನ್ನು ವಿಶ್ವ ದರ್ಜೆಯ ಕ್ರಿಕೆಟಿಗನನ್ನಾಗಿ ಮಾಡಿದೆ. ಅವರು ಈ ಸರಣಿಯಲ್ಲಿ ರನ್‌ಗಾಗಿ ಹಂಬಲಿಸುತ್ತಿದ್ದಾರೆ. ಅವರ ರನ್‌ ಗಳಿಕೆ ಹಂಬಲ ಆಸ್ಟ್ರೇಲಿಯಾಕ್ಕೂ ಮುಂದುವರಿಯಲಿದೆ,” ಎಂದು ಗಂಭೀರ್ ಹೇಳಿದ್ದಾರೆ.

ಪ್ರತಿ ಪಂದ್ಯದ ನಂತರ ನೀವು ಜನರ ಅಭಿಪ್ರಾಯ ನಿರ್ಣಯಿಸಬಾದರು. ಪ್ರತಿ ಪಂದ್ಯದ ನಂತರ ನೀವು ಜನರ ನಿರ್ಣಯವನ್ನು ಪರಿಶಿಲೀಸುತ್ತಿದ್ದರೆ ಅದು ಅವರಿಗೆ ನ್ಯಾಯವಲ್ಲ. ಮುಖ್ಯವಾಗಿ ನಾವು ಫಲಿತಾಂಶಗಳನ್ನು ಪಡೆಯಲು ಸಾಧ್ಯವಾದರೆ ಫಲಿತಾಂಶಗಳನ್ನು ನಮ್ಮ ಪರವಾಗಿ ಪಡೆಯಲು ಜನರು ಏನು ಬೇಕೋ ಅದನ್ನು ಮಾಡುತ್ತಿದ್ದರೆ ಒಳ್ಳೆಯದು ಎಂದು ಗಂಭೀರ್ ಹೇಳಿದರು.

ಆಟಗಾರರನ್ನು ಬೆಂಬಲಿಸುವುದು ನನ್ನ ಕೆಲಸ: ಗಂಭೀರ್

ಡ್ರೆಸ್ಸಿಂಗ್ ರೂಮ್‌ನಲ್ಲಿ ತಮ್ಮ ಪಾತ್ರ ವೇನು ಎಂಬುದನ್ನು ಗಂಭೀರ್ ಪುನರುಚ್ಚರಿಸಿದ್ದಾರೆ. ಪ್ರತಿಯೊಬ್ಬರಿಗೂ ಪ್ರತಿದಿನ ಉತ್ತಮ ದಿನಗಳು ಇರುವುದಿಲ್ಲ. ನಾವು ನಮ್ಮ ಆಟಗಾರರನ್ನು ಬೆಂಬಲಿಸುತ್ತಲೇ ಇರಬೇಕು ಎಂದು ನಾನು ಭಾವಿಸುತ್ತೇನೆ. ಆಟಗಾರರನ್ನು ಬೆಂಬಲಿಸುವುದು ನನ್ನ ಕೆಲಸ. ನನ್ನ ಕೆಲಸ ಅತ್ಯುತ್ತಮ ಪ್ಲೇಯಿಂಗ್ ಇಲೆವೆನ್ ಅನ್ನು ಆಯ್ಕೆ ಮಾಡುತ್ತಲೇ ಇರಬೇಕಾಗುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Sanju Samson : ಸಂಜು ಸ್ಯಾಮ್ಸನ್‌ಗೆ ಶಾಲು ಹೊದಿಸಿ ಸ್ವಾಗತ ನೀಡಿದ ತಿರುವನಂತಪುರ ಎಂಪಿ ಶಶಿ ತರೂರ್‌

ಪ್ರತಿಯೊಬ್ಬರೂ ರನ್‌ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ. ಸತತ ಎಂಟು ಟೆಸ್ಟ್ ಪಂದ್ಯಗಳಿವೆ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದ, ಇದು ಬಹುಶಃ ಅವರು ಸತತ ಎಂಟು ಟೆಸ್ಟ್ ಪಂದ್ಯಗಳನ್ನು ನೋಡುವ ಮತ್ತು ಉತ್ತಮ ಪ್ರದರ್ಶನ ನೀಡಲಿದ್ದಾರೆ, “ಎಂದು ಗಂಭೀರ್ ಹೇಳಿದ್ದಾರೆ.