Thursday, 12th December 2024

ವಿಂಬಲ್ಡನ್, ಒಲಿಂಪಿಕ್ಸ್ʼನಿಂದ ಹಿಂದೆ ಸರಿದ ರಾಫೆಲ್ ನಡಾಲ್

ಪ್ಯಾರಿಸ್: ವಿಂಬಲ್ಡನ್ ಮತ್ತು ಟೋಕಿಯೋ ಒಲಿಂಪಿಕ್ಸ್ʼನಿಂದ ಹಿಂದೆ ಸರಿದಿರುವುದಾಗಿ ರಾಫೆಲ್ ನಡಾಲ್ ಘೋಷಿಸಿದ್ದಾರೆ.

ರಾಫೆಲ್ ನಡಾಲ್ ಅವರು ಜೂನ್ 28ರಿಂದ ಪ್ರಾರಂಭವಾಗುವ ವಿಂಬಲ್ಡನ್ ಮತ್ತು ಮುಂದಿನ ತಿಂಗಳು ಆರಂಭವಾಗಲಿರುವ ಒಲಿಂಪಿಕ್ಸ್ʼನಿಂದ ಹಿಂದೆ ಸರಿಯುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ಕಠಿಣ ವೇಳಾಪಟ್ಟಿ ಮತ್ತು ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ನಡುವಿನ ಸಣ್ಣ ಅಂತರವನ್ನ ಪುಲ್-ಔಟ್ʼಗೆ ಪ್ರಮುಖ ಕಾರಣಗಳಲ್ಲಿ ಒಂದೆಂದು ಉಲ್ಲೇಖಿಸಿ ಬರೆದಿದ್ದಾರೆ.

‘ನನ್ನ ವೃತ್ತಿಜೀವನವನ್ನು ದೀರ್ಘಗೊಳಿಸುವುದು ಮತ್ತು ನನಗೆ ಸಂತೋಷವನ್ನುಂಟು ಮಾಡುವ ಕೆಲಸವನ್ನು ಮುಂದುವರಿಸು ವುದು ಗುರಿಯಾಗಿದೆ. ಅಂದ್ರೆ ಅತ್ಯುನ್ನತ ಮಟ್ಟದಲ್ಲಿ ಸ್ಪರ್ಧಿಸುವುದು ಮತ್ತು ಸ್ಪರ್ಧೆಯ ಗರಿಷ್ಠ ಮಟ್ಟದಲ್ಲಿ ಆ ವೃತ್ತಿಪರ ಮತ್ತು ವೈಯಕ್ತಿಕ ಗುರಿಗಳಿಗಾಗಿ ಹೋರಾಡುವುದು’ ಎಂದಿದ್ದಾರೆ.