ಅಬುಧಾಬಿ: ಮೊದಲ ಓವರಿನಲ್ಲೇ ರುಬೆಲ್ ಟ್ರಂಪಲ್‌ಮ್ಯಾನ್ ಅವರ ಮ್ಯಾಜಿಕ್ ಸ್ಪೆಲ್’ಗೆ 3 ವಿಕೆಟ್ ಉರುಳಿಸಿಕೊಂಡು ಆಘಾತಕ್ಕೆ ಸಿಲುಕಿದ ಸ್ಕಾಟ್ಲೆಂಡ್, ಬುಧವಾರದ ನಮೀಬಿಯಾ ಎದುರಿನ ಟಿ20 ವಿಶ್ವಕಪ್ ಪಂದ್ಯದಲ್ಲಿ 4 ವಿಕೆಟ್‌ಗಳ ಸೋಲಿಗೆ ತುತ್ತಾಗಿದೆ.
ಸ್ಕಾಟ್ಲೆಂಡ್ 8 ವಿಕೆಟಿಗೆ ಕೇವಲ 109 ರನ್ ಗಳಿಸಿದರೆ, ನಮೀಬಿಯಾ 19.1 ಓವರ್‌ಗಳಲ್ಲಿ 6 ವಿಕೆಟಿಗೆ 115 ರನ್ ಹೊಡೆದು ಜಯ ಸಾಧಿಸಿತು.
ಮೊದಲ ಸಲ ಟಿ20 ವಿಶ್ವಕಪ್ ಪ್ರಧಾನ ಸುತ್ತಿನಲ್ಲಿ ಆಡಲಿಳಿದ ನಮೀಬಿಯಾದ್ದು ಕನಸಿನ ಆರಂಭವಾಗಿತ್ತು. ವೇಗಿ ರುಬೆಲ್ ಟ್ರಂಪಲ್‌ಮ್ಯಾನ್ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದರಷ್ಟೇ ಅಲ್ಲ, ಮೊದಲ ಓವರಿನಲ್ಲಿ ಸ್ಕಾಟ್ಲೆಂಡ್‌ನ ಮೂವರು ಆಟಗಾರರನ್ನು ಶೂನ್ಯಕ್ಕೆ ಉರುಳಿಸಿ ಅಸಾಮಾನ್ಯ ಪ್ರದರ್ಶನ ವಿತ್ತರು. ಮೊದಲ ಎಸೆತದಲ್ಲಿ ಜಾರ್ಜ್ ಮುನ್ಸಿ, 3ನೇ ಎಸೆತದಲ್ಲಿ ಕಾಲಂ ಮೆಕ್‌ಲಿಯೋಡ್ ಹಾಗೂ 4ನೇ ಎಸೆತದಲ್ಲಿ ನಾಯಕ ರಿಚೀ ಬೆರಿಂಗ್ಟನ್ ವಿಕೆಟ್ ಹಾರಿ ಹೋಯಿತು.
ಸ್ಕೋರ್ 18ಕ್ಕೆ ಏರಿದಾಗ ಕ್ರೆಗ್ ವ್ಯಾಲೇಸ್ (4) ವಿಕೆಟ್ ಬಿತ್ತು. 44 ರನ್ ಮಾಡಿದ ಲೀಸ್ಕ್ ಸ್ಕಾಟ್ಲೆಂಡ್ ಸರದಿಯ ಗರಿಷ್ಠ ಸ್ಕೋರರ್ (27 ಎಸೆತ, 4 ಬೌಂಡರಿ, 2 ಸಿಕ್ಸರ್). ಕೊನೆಯಲ್ಲಿ ಕ್ರಿಸ್ ಗ್ರೀವ್ಸ್ (25) ಹೋರಾಟ ನಡೆಸಿದ್ದರಿಂದ ತಂಡದ ಮೊತ್ತ ನೂರರ ಗಡಿ ದಾಟಿತು.
ಸಂಕ್ಷಿಪ್ತ ಸ್ಕೋರ್: ಸ್ಕಾಟ್ಲೆಂಡ್-8 ವಿಕೆಟಿಗೆ 109