Thursday, 12th December 2024

Natasa Stankovic : ಪುತ್ರನನ್ನು ಹಾರ್ದಿಕ್ ಪಾಂಡ್ಯನ ಮನೆಯಲ್ಲಿ ಬಿಟ್ಟು ಹೋದ ಮಾಜಿ ಪತ್ನಿ ನತಾಶಾ!

Natasa Stankovic

ಬೆಂಗಳೂರು: ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈ ವರ್ಷದ ಜುಲೈನಲ್ಲಿ ತಮ್ಮ ಪತ್ನಿ ಹಾಗೂ ರೂಪದರ್ಶಿ ನತಾಶಾ ಸ್ಟಾಂಕೋವಿಕ್ (Natasa Stankovic) ಅವರಿಂದ ಬೇರ್ಪಟ್ಟಿದ್ದರು. ಈ ಸುದ್ದಿ ಹೊರಕ್ಕೆ ಬಂದ ಬಳಿಕದಿಂದ ಪಾಂಡ್ಯ ಚರ್ಚೆಯ ವಿಷಯವಾಗಿದ್ದರು. ಈ ಇಬ್ಬರು ಸೆಲೆಬ್ರಿಟಿಗಳು 2020 ರಲ್ಲಿ ವಿವಾಹವಾಗಿದ್ದರು. 2023 ರಲ್ಲಿ ಬೇರ್ಪಡುವ ನಿರ್ಧಾರಕ್ಕೆ ಬಂದಿದ್ದರು. ಅವರು 4 ವರ್ಷಗಳ ವೈವಾಹಿಕ ಜೀವನದ ನಂತರ ಬೇರ್ಪಡಲು ನಿರ್ಧರಿಸಿದರು. ವಿಚ್ಛೇದನದ ನಂತರ ನತಾಶಾ ತಮ್ಮ ಊರು ಸರ್ಬಿಯಾಕ್ಕೆ ಪ್ರಯಾಣಿಸಿದ್ದರು. ಈ ವೇಳೆ ನಾಲ್ಕು ವರ್ಷದ ಮಗ ಅಗಸ್ತ್ಯ ನನ್ನು ಕರೆದುಕೊಂಡು ಹೋಗಿದ್ದರು. ಇತ್ತೀಚಿನ ಬೆಳವಣಿಗೆಯಲ್ಲಿ ನತಾಶಾ ಸೋಮವಾರ ಮುಂಬೈಗೆ ಮರಳಿದ್ದರು. ಬಂದವರೇ ಪುತ್ರ ಅಗಸ್ತ್ಯನನ್ನು ಮಾಜಿ ಪತಿ ಹಾರ್ದಿಕ್‌ನ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ.

ಹಾರ್ದಿಕ್ ಅವರ ಅತ್ತಿಗೆ ಪಂಕುರಿ ಶರ್ಮಾ (ಕೃನಾಲ್ ಪಾಂಡ್ಯ ಪತ್ನಿ) ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಈ ವಿಷಯ ಬೆಳಕಿಗೆ ಬಂದಿದೆ. ಪಂಕುರಿ ಅಗಸ್ತ್ಯ ಮತ್ತು ಅವರ ತಮ್ಮ ಮಗ ಕವೀರ್ ಜತೆಗೆ ಕೂಡಿಕೊಂಡು ಆಡುತ್ತಿರುವ ಹೃದಯಸ್ಪರ್ಶಿ ವಿಡಿಯೊವೊಂದನ್ನು ಸೋಶಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಿದ್ದರು.

ವೀಡಿಯೊದಲ್ಲಿ ಪಂಕುರಿ ಮಡಿಲಲ್ಲಿ ಇಬ್ಬರು ಮಕ್ಕಳು ಕುಳಿತಿದ್ದಾರೆ. ಈ ಮುದ್ದಾದ ಕ್ಷಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ಈ ಚಿತ್ರವು ಹಾರ್ದಿಕ್‌ ಹಾಗೂ ನತಾಶಾ ಬೇರ್ಪಟ್ಟ ಹೊರತಾಗಿಯೂ ಮಗನ ವಿಚಾರದಲ್ಲಿ ಉತ್ತಮ ನಿರ್ಧಾರ ಕೈಗೊಂಡಂತೆ ಕಂಡು ಬರುತ್ತಿದೆ.

ವಿಚ್ಛೇದನ ಖಚಿತ

ಜುಲೈ 2024ರಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ನತಾಶಾ ವಿಚ್ಛೇದನ ಮಾಹಿತಿಯನ್ನು ಪ್ರಕಟಿಸಿದ್ದರು. ನತಾಶಾ ಮುಂಬೈ ಬಿಟ್ಟು ಪುತ್ರ ಅಗಸ್ತ್ಯನ ಜತೆ ಸರ್ಬಿಯಾದ ತನ್ನ ಊರಿಗೆ ಮರಳಿದ ಸ್ವಲ್ಪ ಸಮಯದ ನಂತರ ಈ ಪ್ರಕಟಣೆ ಹೊರಬಿದ್ದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ದಂಪತಿಗಳು ಪರಸ್ಪರ ಅಭಿಪ್ರಾಯಗಳನ್ನು ಬೆಂಬಲಿಸುವುದಾಗಿ ಹೇಳಿಕೊಂಡಿದ್ದರು.

ನಾಲ್ಕು ವರ್ಷಗಳ ನಂತರ ನತಾಶಾ ಮತ್ತು ನಾನು ಪರಸ್ಪರ ಬೇರ್ಪಡಲು ನಿರ್ಧರಿಸಿದ್ದೇವೆ. ನಾವು ಎಲ್ಲವನ್ನೂ ಪರಸ್ಪರ ನೀಡಿದ್ದೇವೆ. ಬೇರ್ಪಡುವ ನಿರ್ಧಾರ ನಮ್ಮಿಬ್ಬರಿಗೂ ಉತ್ತಮ ಎಂದು ನಾವು ನಂಬುತ್ತೇವೆ. ನಾವು ಪರಸ್ಪರ ಹಂಚಿಕೊಂಡ ಸಂತೋಷ, ಗೌರವ ಮತ್ತು ಒಡನಾಟ ವಿಶೇಷ ಎಂದು ಅವರು ಹಾರ್ದಿಕ್ ಹೇಳಿಕೊಂಡಿದ್ದರು.

ಇದನ್ನೂ ಓದಿ: Ravindra Jadeja : ಕ್ರಿಕೆಟಿಗ ರವೀಂದ್ರ ಜಡೇಜಾ ಬಿಜೆಪಿಗೆ ಸೇರ್ಪಡೆ

ಹಾರ್ದಿಕ್ ಅವರ ಆಡಂಬರದ ವ್ಯಕ್ತಿತ್ವವು ಅವರಿಬ್ಬ ವಿಚ್ಛೇದನಕ್ಕೆ ಕಾರಣ ಎಂದು ವರದಿಗಳು ಸೂಚಿಸುತ್ತವೆ. ಇದನ್ನು ನಿಭಾಯಿಸಲು ನತಾಶಾಗೆ ಕಷ್ಟವಾಯಿತು ಎಂದು ವರದಿಗಳು ಹೇಳಿವೆ. ಟೈಮ್ಸ್ ನೌ ಮೂಲಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ತೋರುವ ಅತಿಯಾದ ಆತ್ಮವಿಶ್ವಾಸದ ಸ್ವಭಾವವು ದಂಪತಿ ನಡುವೆ ಅಂತರ ಸೃಷ್ಟಿಸಿತು.