Friday, 20th September 2024

ರಾಷ್ಟ್ರೀಯ ಖೋಖೋ ಪಂದ್ಯ : ಮಹಾರಾಷ್ಟ್ರ ವಿನ್ಕನರ್ 

ಕರ್ನಾಟಕ ರನ್ನರ್                     
ತಿಪಟೂರು: ಕೊಬ್ಬರಿ ನಾಡಿನ ಕಲ್ಪತರು ಕ್ರೀಡಾಂಗಣದಲ್ಲಿ ತಿಪಟೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜನೆ ಮಾಡಲಾದ 33 ನೇ ರಾಷ್ಟ್ರೀಯ ಸಬ್ ಜೂನಿಯರ್ ಖೋ ಖೋ ಚಾಂಪಿಯನ್ಶಿಪ್ 2023 ಐದು ದಿನಗಳ ಕಾಲ ನಡೆದ ಕ್ರೀಡಾಕೂಟಕ್ಕೆ ವಿಜೃಂಭಣೆಯಿಂದ ತೆರೆ ಎಳೆಯಲಾಯಿತು.
ಮಹಾರಾಷ್ಟ್ರ ಬಾಲಕಿಯರ  ತಂಡವು ಕರ್ನಾಟಕ ತಂಡವನ್ನು 16=14 ಅಂಕಗಳೊಂದಿಗೆ ಮಣಿಸಿ ಪ್ರಥಮ ಸ್ಥಾನಗಳಿಸಿತು. ಕರ್ನಾಟಕ ದ್ವಿತೀಯ ಸ್ಥಾನ ಪಡೆದಿದ್ದು.ಬಾಲಕರ ವಿಭಾಗದಲ್ಲಿಯೂ ಮಹಾ ರಾಷ್ಟ್ರ ತಂಡವು 34=20 ಅಂಕಗಳನ್ನು ಪಡೆದು ಕರ್ನಾಟಕ ತಂಡವನ್ನು ಹಿಂದಿಟ್ಟು. ಪ್ರಥಮ ಸ್ಥಾನ ಪಡೆಯಿತು.
ರಾಷ್ಟ್ರೀಯ ಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನಕ್ಕೆ ಕರ್ನಾಟಕ ಬಾಲಕ ಮತ್ತು ಬಾಲಕಿಯರ ತಂಡ ತೃಪ್ತಿ ಪಡಬೇಕಾಯಿತು. ಭಾನುವಾರ ರಾತ್ರಿ ನಡೆದ ಮಹಾರಾಷ್ಟ್ರದ ಬಾಲಕ, ಬಾಲಕೀಯರ ತಂಡ ಹಾಗೂ ಕರ್ನಾಟಕದ ಬಾಲಕ ಬಾಲಕಿಯರ ತಂಡದ ಆಟಕ್ಕೆ ಕಲ್ಪತರು ನಾಡಿನ ಕ್ರೀಡಾ ಪ್ರೇಮಿಗಳು ಫಿದಾ ಆದರೂ. ಬಾಲಕಿಯರ  ವಿಭಾಗದಲ್ಲಿ ಆಲ್-ರೌಂಡರ್ ಆಟ ಪ್ರದರ್ಶಿಸಿದ ಬಾಲಕಿಗೆ ಇಳ ಪ್ರಶಸ್ತಿ, ಬಾಲಕರ ವಿಭಾಗದಲ್ಲಿ ಆಲ್-ರೌಂಡರ್ ಆಟವಾಡಿದ ಬಾಲಕನಿಗೆ ಭರತ್ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು. ಪ್ರಥಮ,ದ್ವಿತೀಯ ಹಾಗೂ ತೃತೀಯ ತಂಡಗಳಿಗೆ ಆಕರ್ಷಕ ಟ್ರೋಫಿ ನೀಡಲಾಯಿತು. ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಟ್ರೋಫಿಯೊಂದಿಗೆ ಉತ್ತಮ ಗುಣಮಟ್ಟದ ಟ್ರಾಲಿ ಬ್ಯಾಗ್ ಉಡುಗೊರೆಯಾಗಿ ನೀಡಲಾಯಿತು.
ಐದು ದಿನಗಳಿಂದ ನಡೆದ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದ ಕರ್ನಾಟಕ ತಂಡಕ್ಕೆ ತಿಪಟೂರು ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಲೋಕೇಶ್ವರ್ ಮತ್ತು ಅವರ ತಂಡ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.