Wednesday, 11th December 2024

ಏಷ್ಯನ್ ಗೇಮ್ಸ್: ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ನವೋರೆಮ್

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್​ನ ಮಹಿಳೆಯರ 60 ಕೆಜಿ ವುಶು ಫೈನಲ್‌ನಲ್ಲಿ ಭಾರತದ ರೋಶಿಬಿನಾ ದೇವಿ ನವೋರೆಮ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

ಮಹಿಳೆಯರ 60 ಕೆಜಿ ವುಶು ಸಂಡಾ ಫೈನಲ್‌ನಲ್ಲಿ ಭಾರತದ ನವೋರೆಮ್ ರೋಶಿಬಿನಾ ದೇವಿ ಅವರು ಚೀನಾದ ಹೆವಿವೇಟ್ ವು ಕ್ಸಿಯಾವೊಯ್ ವಿರುದ್ಧ 0-2 ಅಂತರದ ಸೋಲಿನ ನಂತರ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಈ ವಿಭಾಗದಲ್ಲಿ ಹಾಲಿ ಚಾಂಪಿಯನ್‌ ಆಗಿರುವ ವು ಕ್ಸಿಯಾವೊಯಿ ವಿರುದ್ಧ ಭಾರತೀಯ ಆಟಗಾರ್ತಿ ಕಠಿಣ ಹೋರಾಟ ನಡೆಸಿ ದರು. ಚೀನಾದ ಆಟಗಾರ್ತಿಗೆ ಬಲವಾದ ಆರಂಭ ವನ್ನು ಪಡೆಯಲು ಅವಕಾಶ ಮಾಡಿಕೊಟ್ಟರು. ಎರಡು ಸುತ್ತುಗಳ ನಂತರ ತೀರ್ಪು ಗಾರರು ವು ಕ್ಸಿಯಾವೊಯಿ ಅವರನ್ನು ವಿಜೇತರೆಂದು ಘೋಷಿಸಿದರು.

ತನ್ನ ಎದುರಾಳಿಯನ್ನು ಮಣಿಸಲು ಪ್ರಯತ್ನಿಸಿ ದರು. ಮೊದಲ ಸುತ್ತು ಆಕ್ರಮಣಕಾರಿ ಆಗಿತ್ತು. ರೋಶಿಬಿನಾ ಅವರನ್ನು ವು ಕ್ಸಿಯಾವೊಯಿ ತಡೆಯಲು ಪ್ರಾರಂಭಿಸಿದರು. ಆದರೂ, ಮಣಿಪುರಿ ಅಥ್ಲೀಟ್ ಪುಟಿದೇಳಲು ಪ್ರಯತ್ನಿಸಿದರು. ಆದರೆ, ಮೊದಲ ಸುತ್ತಿನಲ್ಲಿ ವು ಕ್ಸಿಯಾವೊಯಿ 1-0 ಮುನ್ನಡೆ ಸಾಧಿಸಿದರು.

ಅವರ ಶಿಸ್ತು ಮತ್ತು ಸಂಕಲ್ಪ ಕೂಡ ಮೆಚ್ಚುವಂತದ್ದು. ಅವರಿಗೆ ಅಭಿನಂದನೆಗಳು” ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂದಿದ್ದಾರೆ