ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Neeraj Chopra: ಮತ್ತೊಂದು ಇತಿಹಾಸ ಬರೆದ ನೀರಜ್‌ ಚೋಪ್ರಾ; 90.23 ಮೀ. ದೂರಕ್ಕೆ ಜಾವಲಿನ್‌ ಎಸೆದ ಚಿನ್ನದ ಹುಡುಗ

2025 Doha Diamond League: ಅವಳಿ ಒಲಿಂಪಿಕ್ಸ್‌ ಪದಕ ಗೆದ್ದು ಇತಿಹಾಸ ಬರೆದ ಭಾರತದ ಸ್ಟಾರ್‌ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಮೇ 16ರಂದು ಮತ್ತೊಂದು ದಾಖಲೆ ಬರೆದಿದ್ದಾರೆ. ದೋಹಾ ಡೈಮಂಡ್‌ ಲೀಗ್‌ನಲ್ಲಿ ಅವರು ಸುಮಾರು 90.23 ಮೀ. ದೂರ ಜಾವೆಲಿನ್‌ ಎಸೆದು ಇತಿಹಾಸ ಸೃಷ್ಟಿಸಿದ್ದಾರೆ.

90.23 ಮೀ. ದೂರಕ್ಕೆ ಜಾವಲಿನ್‌ ಎಸೆದ ನೀರಜ್‌ ಚೋಪ್ರಾ

ನೀರಜ್‌ ಚೋಪ್ರಾ.

Profile Ramesh B May 16, 2025 11:59 PM

ದೋಹಾ: ಅವಳಿ ಒಲಿಂಪಿಕ್ಸ್‌ ಪದಕ ಗೆದ್ದು ಇತಿಹಾಸ ಬರೆದ ಭಾರತದ ಸ್ಟಾರ್‌ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ (Neeraj Chopra) ಮೇ 16ರಂದು ಮತ್ತೊಂದು ದಾಖಲೆ ಬರೆದಿದ್ದಾರೆ. ದೋಹಾ ಡೈಮಂಡ್‌ ಲೀಗ್‌ನಲ್ಲಿ (2025 Doha Diamond League) ಅವರು ಸುಮಾರು 90.23 ಮೀ. ದೂರ ಜಾವೆಲಿನ್‌ ಎಸೆದು ಇತಿಹಾಸ ಸೃಷ್ಟಿಸಿದ್ದಾರೆ. ಆ ಮೂಲಕ ಅವರು ಇದೇ ಮೊದಲ ಬಾರಿಗೆ 90 ಮೀ. ಗಡಿಯನ್ನು ದಾಟಿದ ಸಾಧನೆ ಮಾಡಿದ್ದಾರೆ. ತಮ್ಮ 3ನೇ ಪ್ರಯತ್ನದಲ್ಲಿ ಅವರು 90 ಮೀ. ಗಡಿಯನ್ನು ದಾಟಿದರು. ಜಾವೆಲಿನ್‌ 90.23 ಮೀ. ದೂರಲ್ಲಿ ಬೀಳುವ ಮೂಲಕ ಚಿನ್ನದ ಹುಡುಗನ ಮುಡಿಗೆ ಮತ್ತೊಂದು ದಾಖಲೆಗೆ ಗರಿ ಸಿಕ್ಕಂತಾಯ್ತು. ಅದಾಗ್ಯೂ ಅವರು ಟೂರ್ನಿಯಲ್ಲಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ನೀರಜ್‌ ತಮ್ಮ ಮೊದಲ ಪ್ರಯತ್ನದಲ್ಲಿ 88.44 ಮೀ. ದೂರಕ್ಕೆ ಎಸೆದರು. 3ನೇ ಪ್ರಯತ್ನದಲ್ಲಿ ಅವರಿಗೆ ದಾಖಲೆ ನಿರ್ಮಿಸಲು ಸಾಧ್ಯವಾಯ್ತು. ಆ ಮೂಲಕ ಜಾವಲಿನ್‌ ಥ್ರೋದಲ್ಲಿ 90 ಮೀ. ಗಡಿ ದಾಟಿದ ವಿಶ್ವದ 25ನೇ, ಏಷ್ಯಾದ 3ನೇ ಕ್ರೀಡಾಪಟು ಎನಿಸಿಕೊಂಡರು. ನೀರಜ್‌ ಅವರ 4ನೇ ಪ್ರಯತ್ನ 89.84 ದೂರಕ್ಕೆ ಸಾಗಿತು. 6ನೇ ಪ್ರಯತ್ನದಲ್ಲಿ 88.20 ಮೀ. ದೂರ ಎಸೆದರು. 2 ಮತ್ತು 5ನೇ ಪ್ರಯತ್ನ ಫೌಲ್‌ ಆಗಿತ್ತು. ಇದೇ ವೇಳೆ ಜರ್ಮನಿಯ ಜೂಲಿಯನ್ ವೆಬರ್ 91.06 ಮೀ. ದೂರಕ್ಕೆ ಎಸೆದು ಚಾಂಪಿಯನ್‌ ಎನಿಸಿಕೊಂಡರು.



ಫಲಿತಾಂಶ

ಜೂಲಿಯನ್ ವೆಬರ್ - 91.06 ಮೀ. (ಪ್ರಥಮ)

ನೀರಜ್ ಚೋಪ್ರಾ - 90.23 ಮೀ. (ದ್ವಿತೀಯ)

ಆಂಡರ್ಸನ್ ಪೀಟರ್ಸ್ - 85.64 ಮೀ. (ತೃತೀಯ).

ನೀರಜ್‌ ಚೋಪ್ರಾ ದೋಹಾ ಡೈಮಂಡ್‌ ಲೀಗ್‌ನಲ್ಲಿ 2023ರಲ್ಲಿ (88.67 ಮೀ.) ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು ಮತ್ತು 2024ರಲ್ಲಿ (88.36 ಮೀ.) ಎರಡನೇ ಸ್ಥಾನ ಪಡೆದಿದ್ದರು. ನೀರಜ್‌ 2020ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು 2024ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ್ಕ್ಕೆ ಕೊರಳೊಡ್ಡಿದ್ದರು. ನೀರಜ್‌ ಚೋಪ್ರಾ ಅವರ ಹೊಸ ಸಾಧನೆಗೆ ಕ್ರೀಡಾ ಕ್ಷೇತ್ರದ ಗಣ್ಯರು ಅಬಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Neeraj Chopra: ಡೋಪಿಂಗ್‌ ದೇಶದ ದೊಡ್ಡ ಸಮಸ್ಯೆ; ನೀರಜ್‌ ಚೋಪ್ರಾ



ಲೆಫ್ಟಿನೆಂಟ್ ಕರ್ನಲ್ ಆಗಿ ನೀರಜ್‌ ಚೋಪ್ರಾಗೆ ಬಡ್ತಿ

ಇತ್ತೀಚೆಗಷ್ಟೇ ನೀರಜ್‌ ಚೋಪ್ರಾ ಅವರಿಗೆ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ನೀರಜ್‌ ಚೋಪ್ರಾಗೆ ಬಡ್ತಿ ನೀಡಲಾಗಿತ್ತು. ಚೋಪ್ರಾ ಅವರನ್ನು ಪ್ರಾದೇಶಿಕ ಸೇನೆಯಲ್ಲಿ (Territorial Army) ಲೆಫ್ಟಿನೆಂಟ್ ಕರ್ನಲ್ (Lieutenant Colonel) ಆಗಿ ನೇಮಿಸಲಾಗಿದೆ ಎಂದು ರಕ್ಷಣಾ ಸಚಿವಾಲಯವು ಭಾರತ ಸರ್ಕಾರದ ಅಧಿಕೃತ ವಾರಪತ್ರಿಕೆಯಾದ ಭಾರತ ಗೆಜೆಟ್‌ನಲ್ಲಿ ಪ್ರಕಟಿಸಿತ್ತು. ನೀರಜ್ ಚೋಪ್ರಾ ಅವರ ಹೊಸ ಹುದ್ದೆಯು 2025ರ ಏಪ್ರಿಲ್ 16ರಂದು ಜಾರಿಗೆ ಬಂದಿದೆ ಎಂದೂ ತಿಳಿಸಿತ್ತು. ಇದಕ್ಕೂ ಮೊದಲು ಅವರು ಸೇನೆಯಲ್ಲಿ ಸುಬೇದಾರ್ ಹುದ್ದೆಯನ್ನು ಅಲಂಕರಿಸಿದ್ದರು. ಇದೀಗ ಅಗ್ರ ದರ್ಜೆಯ ಹುದ್ದಗೆ ಬಡ್ತಿಯನ್ನು ಪಡೆದಿದ್ದಾರೆ. ಹರಿಯಾದ 28 ವರ್ಷದ ನೀರಜ್‌ ಭಾರತದಲ್ಲಿ ಜಾವೆಲಿನ್ ಥ್ರೋವನ್ನು ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.