ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Neeraj Chopra: ಪೋಲೆಂಡ್‌ ಕೂಟದಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟ ನೀರಜ್‌ ಚೋಪ್ರಾ

ನೀರಜ್‌ 84.14 ಮೀಟರ್ ದೂರ ಎಸೆಯಲಷ್ಟೇ ಶಕ್ತವಾದರು. 2024ರಲ್ಲಿ ಭುವನೇಶ್ವರದಲ್ಲಿ ನಡೆದ ಫೆಡರೇಷನ್ ಕಪ್‌ನಲ್ಲಿ 82.27 ಮೀಟರ್ ದೂರ ಎಸೆದು ಚಿನ್ನ ಗೆದ್ದ ನಂತರ ಚೋಪ್ರಾ ಅವರು ಸ್ಪರ್ಧೆಯೊಂದರಲ್ಲಿ 85 ಮೀಟರ್‌ಗಿಂತ ಕಡಿಮೆ ಸಾಧನೆ ಮಾಡಿದ್ದು ಇದೇ ಮೊದಲು.

ಪೋಲೆಂಡ್‌ ಕೂಟದಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟ ನೀರಜ್‌ ಚೋಪ್ರಾ

Profile Abhilash BC May 24, 2025 7:57 AM

ಹಾಝಫ್‌ (ಪೋಲೆಂಡ್‌): ಇತ್ತೀಚೆಗಷ್ಟೇ ದೋಹಾದಲ್ಲಿ ನಡೆದಿದ್ದ ಡೈಮಂಡ್‌ ಲೀಗ್‌ನಲ್ಲಿ 90.23 ಮಿ. ದೂರಕ್ಕೆ ಜಾವೆಲಿನ್‌ ಎಸೆದು ರಾಷ್ಟ್ರೀಯ ದಾಖಲೆ ಬರೆದಿದ್ದ ಭಾರತದ ನೀರಜ್‌ ಚೋಪ್ರಾ(Neeraj Chopra) ಅವರು ಶುಕ್ರವಾರ ರಾತ್ರಿ ನಡೆದಿದ್ದ ಆರ್ಲಿನ್ ಯಾನುಷ್‌ ಕುಸೊಸಿನ್‌ಸ್ಕಿ ಸ್ಮರಣಾರ್ಥ(Janusz Kusocinski Memorial 2025) ಅಥ್ಲೆಟಿಕ್ ಕೂಟದಲ್ಲಿ ಎರಡನೇ ಸ್ಥಾನ ಪಡೆದರು. ಜರ್ಮನಿಯ ಜೂಲಿಯನ್‌ ವೆಬರ್‌(Julian Weber) ಅಗ್ರಸ್ಥಾನಿಯಾದರು.

ನೀರಜ್‌ 84.14 ಮೀಟರ್ ದೂರ ಎಸೆಯಲಷ್ಟೇ ಶಕ್ತವಾದರು. 2024ರಲ್ಲಿ ಭುವನೇಶ್ವರದಲ್ಲಿ ನಡೆದ ಫೆಡರೇಷನ್ ಕಪ್‌ನಲ್ಲಿ 82.27 ಮೀಟರ್ ದೂರ ಎಸೆದು ಚಿನ್ನ ಗೆದ್ದ ನಂತರ ಚೋಪ್ರಾ ಅವರು ಸ್ಪರ್ಧೆಯೊಂದರಲ್ಲಿ 85 ಮೀಟರ್‌ಗಿಂತ ಕಡಿಮೆ ಸಾಧನೆ ಮಾಡಿದ್ದು ಇದೇ ಮೊದಲು.



ಚೋಪ್ರಾ ಅವರ ಮೊದಲ, ಮೂರನೇ ಮತ್ತು ನಾಲ್ಕನೇ ಪ್ರಯತ್ನಗಳು ಫೌಲ್‌ ಆದವು. ಎರಡನೇ ಪ್ರಯತ್ನದಲ್ಲಿ 81.28, ಐದನೇ ಪ್ರಯತ್ನದಲ್ಲಿ 81.28 ಮೀ. ಸಾಧನೆ ಮಾಡಿದರು. ಕೊನೆಯಲ್ಲಿ ಎಸೆತ ಸುಧಾರಿಸಿಕೊಂಡು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಮೊದಲ ಸ್ಥಾನ ಪಡೆದ ವೆಬರ್‌ ಕೂಡ 86.12 ಮೀಟರ್‌ ದೂರವಷ್ಟೇ ಎಸೆದರು. ವಿಪರೀತ ಗಾಳಿ ಇದ್ದ ಕಾರಣದಿಂದ ಯಾರಿಂದಲೂ 90 ಮೀ. ಸನಿಹಕ್ಕೆ ಬರಲು ಸಾಧ್ಯವಾಗಲಿಲ್ಲ. ಎರಡು ಬಾರಿಯ ವಿಶ್ವ ಚಾಂಪಿಯನ್‌ ಗೆನೆಡಾದ ಆ್ಯಂಡರ್ಸನ್‌ ಪೀಟರ್ಸ್‌ 83.24 ಮೀಟರ್‌ ಎಸೆದು ಮೂರನೇ ಸ್ಥಾನ ಪಡೆದರು.