WTC Final 2025: ವಿಶ್ವ ಟೆಸ್ಟ್ ಫೈನಲ್ ಪಂದ್ಯಕ್ಕೆ ಭಾರತದ ಇಬ್ಬರು ಅಂಪೈರ್‌ಗಳು ಆಯ್ಕೆ
ಶ್ರೀನಾಥ್ ಮ್ಯಾಚ್ ರೆಫ್ರಿಯಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ ನಿತಿನ್ ಮೆನನ್ 4ನೇ ಅಂಪೈರ್ ಆಗಿ ಕರ್ತವ್ಯ ನಿಭಾಯಿಸಲಿದ್ದಾರೆ. ಇಂಗ್ಲೆಂಡ್‌ನ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ನ್ಯೂಜಿಲ್ಯಾಂಡ್‌ನ ಕ್ರಿಸ್ ಗಫಾನಿ ಫೀಲ್ಡ್ ಅಂಪಾಯರ್ ಆಗಿದ್ದಾರೆ. ರಿಚರ್ಡ್ ಕ್ಯಾಟಲ್‌ಬರೋ ಟಿವಿ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.


ದುಬೈ: ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ(Australia vs South Africa) ವಿರುದ್ಧದ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್(wtc final 2025) ಪಂದ್ಯಕ್ಕೆ ಐಸಿಸಿ ಅಂಪೈರ್‌ಗಳ ಪಟ್ಟಿಯನ್ನು ಪ್ರಕಟಿಸಿದೆ. ಭಾರತದ ಜಾವಗಲ್ ಶ್ರೀನಾಥ್(Javagal Srinath) ಮತ್ತು ನಿತಿನ್ ಮೆನನ್(Nitin Menon) ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀನಾಥ್ ಮ್ಯಾಚ್ ರೆಫ್ರಿಯಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ ನಿತಿನ್ ಮೆನನ್ 4ನೇ ಅಂಪೈರ್ ಆಗಿ ಕರ್ತವ್ಯ ನಿಭಾಯಿಸಲಿದ್ದಾರೆ. ಜೂನ್ 11ರಿಂದ 15ರ ತನಕ ಲಾರ್ಡ್ಸ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಇಂಗ್ಲೆಂಡ್‌ನ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ನ್ಯೂಜಿಲ್ಯಾಂಡ್‌ನ ಕ್ರಿಸ್ ಗಫಾನಿ ಫೀಲ್ಡ್ ಅಂಪಾಯರ್ ಆಗಿದ್ದಾರೆ. ರಿಚರ್ಡ್ ಕ್ಯಾಟಲ್‌ಬರೋ ಟಿವಿ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಡಬ್ಲ್ಯೂಟಿಸಿ ಫೈನಲ್ ಪಂದ್ಯದ ಅಧಿಕಾರಿಗಳು
ಪಂದ್ಯದ ರೆಫರಿ: ಜಾವಗಲ್ ಶ್ರೀನಾಥ್ (ಭಾರತ)
ಆನ್-ಫೀಲ್ಡ್ ಅಂಪೈರ್‌ಗಳು: ರಿಚರ್ಡ್ ಇಲ್ಲಿಂಗ್‌ವರ್ತ್ (ಇಂಗ್ಲೆಂಡ್), ಕ್ರಿಸ್ ಗ್ಯಾಫನಿ (ನ್ಯೂಜಿಲೆಂಡ್)
ಟಿವಿ ಅಂಪೈರ್: ರಿಚರ್ಡ್ ಕೆಟಲ್‌ಬರೋ (ಇಂಗ್ಲೆಂಡ್)
ನಾಲ್ಕನೇ ಅಂಪೈರ್: ನಿತಿನ್ ಮೆನನ್ (ಭಾರತ)
ಇದೇ ಮೊದಲ ಸಲ ಫೈನಲ್ ಪ್ರವೇಶಿಸಿರುವ ದಕ್ಷಿಣ ಆಫ್ರಿಕಾ ತಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಮಣಿಸಿ ಚೊಚ್ಚಲ ವಿಶ್ವಕಪ್ ಟ್ರೋಫಿಯೊಂದನ್ನು ಗೆದ್ದು ಚೋಕರ್ಸ್ ಹಣೆಪಟ್ಟಿ ಕಳಚಿಕೊಳ್ಳುವುದೇ ಎಂದುವು ಫೈನಲ್ ಪಂದ್ಯದ ಕೌತುಕ. ಈಗಾಗಲೇ ಉಭಯ ದೇಶಗಳು ತನ್ನ ತಂಡವನ್ನು ಪ್ರಕಟಿಸಿದೆ.
ಆಸ್ಟ್ರೇಲಿಯಾ ತಂಡ
ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಸ್ಯಾಮ್ ಕಾನ್ಸ್ಟಾಸ್, ಮ್ಯಾಟ್ ಕುಹ್ನೆಮನ್, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಬ್ಯೂ ವೆಬ್‌ಸ್ಟರ್. ಪ್ರಯಾಣ ಮೀಸಲು: ಬ್ರೆಂಡನ್ ಡಾಗೆಟ್.
ಇದನ್ನೂ ಓದಿ wtc final 2025: ಭಾರತ ಟೆಸ್ಟ್ ಫೈನಲ್‌ಗೆ ಅರ್ಹತೆ ಪಡೆಯದ ಕಾರಣ ಇಂಗ್ಲೆಂಡ್ ಕ್ಲಬ್ಗೆ 45 ಕೋಟಿ ನಷ್ಟ!
ದಕ್ಷಿಣ ಆಫ್ರಿಕಾ ತಂಡ
ತೆಂಬಾ ಬವುಮಾ (ನಾಯಕ), ಏಡೆನ್ ಮಾರ್ಕ್ರಾಮ್, ಲುಂಗಿ ಎಂಗಿಡಿ, ಟೋನಿ ಡಿ ಜಾರ್ಜಿ, ಡೇವಿಡ್ ಬೆಡಿಂಗ್‌ಹ್ಯಾಮ್, ಕೇಶವ್ ಮಹಾರಾಜ್, ಟ್ರಿಸ್ಟಾನ್ ಸ್ಟಬ್ಸ್, ಕಾರ್ಬಿನ್ ಬಾಷ್, ಸೆನುರಾನ್ ಮುತ್ತುಸಾಮಿ, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡಾ, ಕೈಲ್ ವೆರೆನ್, ಡೇನ್ ಪ್ಯಾಟರ್ಸನ್, ವಿಯಾನ್ ಮುಲ್ಡರ್, ರಿಯಾನ್ ರಿಕಲ್ಟನ್.