Friday, 22nd November 2024

ನೀರಜ್ ಚೋಪ್ರಾಗೆ ಪರಮ ವಿಶಿಷ್ಠ ಸೇವಾ ಪದಕ

ನವದೆಹಲಿ: ಒಲಿಂಪಿಕ್ಸ್’ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದ ನೀರಜ್ ಚೋಪ್ರಾ ಅವರಿಗೆ 2022ನೇ ಸಾಲಿನ ಪರಮ ವಿಶಿಷ್ಠ ಸೇವಾ ಪದಕವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 73ನೇ ಗಣರಾಜ್ಯೋತ್ಸವದ ಮುನ್ನಾದಿನ ನೀಡಲಾಗುವ ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ಇತರರಿಗೆ 384 ಶೌರ್ಯ ಪ್ರಶಸ್ತಿಗಳನ್ನು ಅನುಮೋದಿಸಿದ್ದಾರೆ. ಇವುಗಳಲ್ಲಿ 12 ಶೌರ್ಯ ಚಕ್ರಗಳು, 3 ಬಾರ್ ಟು ಸೇನಾ ಪದಕಗಳು (ಶೌರ್ಯ), 81 ಸೇನಾ ಪದಕಗಳು (ಶೌರ್ಯ) ಮತ್ತು 2 ವಾಯು ಸೇನಾ ಪದಕಗಳು (ಶೌರ್ಯ) ಸೇರಿವೆ.

ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೂ 2022ನೇ ಸಾಲಿನ ಪರಮ ವಿಶಿಷ್ಠ ಸೇವಾ ಪದಕವನ್ನು ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯನ್ನು ಗಣರಾಜ್ಯೋತ್ಸವದ ಮುನ್ನಾದಿನ ಪದಕ ನೀಡಿ ಗೌರವಿಸಲಾಗುವುದು.