Sunday, 15th December 2024

ನೇಪಾಳದ ಆಲ್ರೌಂಡರ್ ದೀಪೇಂದ್ರ ಸಿಂಗ್ ಐರಿ ದಾಖಲೆ

ವದೆಹಲಿ: ನೇಪಾಳದ ಬ್ಯಾಟಿಂಗ್ ಆಲ್ರೌಂಡರ್ ದೀಪೇಂದ್ರ ಸಿಂಗ್ ಐರಿ ಬುಧವಾರ ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರ ಟಿ20ಐ ಇತಿಹಾಸದಲ್ಲಿ ವೇಗವಾಗಿ ಅರ್ಧಶತಕ ಗಳಿಸಿದ ಸಾರ್ವಕಾಲಿಕ ದಾಖಲೆ ಮುರಿಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಹ್ಯಾಂಗ್ಝೌನ ಪಿಂಗ್ಫೆಂಗ್ ಕ್ಯಾಂಪಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ನೇಪಾಳ ಮತ್ತು ಮಂಗೋಲಿಯಾ ನಡುವಿನ ಏಷ್ಯನ್ ಗೇಮ್ಸ್ 2023 ರ ಪಂದ್ಯದಲ್ಲಿ ಐರಿ ಕೇವಲ ಒಂಬತ್ತು ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು.

2007ರ ಸೆಪ್ಟೆಂಬರ್ 19ರಂದು ಡರ್ಬಾನ್ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಯುವರಾಜ್ ಸಿಂಗ್ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಬಿಗ್ ಬ್ಯಾಷ್ ಲೀಗ್ ಪಂದ್ಯದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಪರ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಕ್ರಿಸ್ ಗೇಲ್ ಅವರ ದಾಖಲೆಯನ್ನು ಸರಿಗಟ್ಟಿದರು.

23 ವರ್ಷದ ಬಲಗೈ ಬ್ಯಾಟ್ಸ್ಮನ್ ಐರಿ ನೇಪಾಳ ಪರ 5 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದರು. ಎಂಟು ಸಿಕ್ಸರುಗಳ ಸಹಾಯ ದಿಂದ 10 ಎಸೆತಗಳಲ್ಲಿ 52 ರನ್ ಗಳಿಸಿ ಔಟಾಗದೆ ಉಳಿದರು.

ನೇಪಾಳ ಕೇವಲ ಮೂರು ವಿಕೆಟ್ ನಷ್ಟಕ್ಕೆ 314 ರನ್ ಗಳಿಸಲು ನೆರವಾದರು.