Thursday, 12th December 2024

ಐಸಿಸಿ ಕ್ರಿಕೆಟ್ ವಿಶ್ವಕಪ್‌: ನೆದರ್ಲೆಂಡ್ಸ್‌ ತಂಡದ ನೂತನ ಜರ್ಸಿ ಬಿಡುಗಡೆ

ಬೆಂಗಳೂರು: ಐಸಿಸಿ ಕ್ರಿಕೆಟ್ ವಿಶ್ವಕಪ್‌ಗಾಗಿ ಭಾರತಕ್ಕೆ ಆಗಮಿಸಿರುವ ನೆದರ್ಲೆಂಡ್ಸ್‌ ಕ್ರಿಕೆಟ್ ತಂಡ ನಾರ್ಡೆಕ್, ತನ್ನ ಅಧಿಕೃತ ಟೀಮ್ ಕಿಟ್ ಅನಾವರಣ ಗೊಳಿಸಿದೆ.

ನೆದರ್ಲೆಂಡ್ಸ್‌ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್, ಮ್ಯಾಕ್ಸ್ ಒಡೌಡ್, ಹೆಡ್ ಕೋಚ್ ರಯಾನ್ ಕುಕ್, ನಾರ್ಡೆಕ್‌ನ ಸಿಇಒ ರಾಜೇಶ್ ಕಶ್ಯಪ್, ಸಹ ಸಂಸ್ಥಾಪಕ ನವಾಲ್ ಕಿಶೋರ್ ಭಾಗಿಯಾಗಿದ್ದರು.

ನೆದರ್ಲೆಂಡ್ಸ್‌ ತಂಡದೊಂದಿಗಿನ ಸಹಭಾಗಿತ್ವದ ಕುರಿತು ನಾರ್ಡೆಕ್‌ನ ಸಿಇಒ ರಾಜೇಶ್ ಕಶ್ಯಪ್, ”2023ರ ವಿಶ್ವಕಪ್ ಸಮೀಪಿಸುತ್ತಿರುವಾಗ ನೆದರ್ಲೆಂಡ್ಸ್‌ ಕ್ರಿಕೆಟ್ ತಂಡದೊಂದಿಗೆ ಪಾಲುದಾರರಾಗುತ್ತಿರುವ ಬಗ್ಗೆ ನಾರ್ಡೆಕ್ ರೋಮಾಂಚನಗೊಂಡಿದೆ. ಇದು ಕೇವಲ ಲೋಗೋ ಪಾಲುದಾರಿಕೆಯಲ್ಲ, ಜಾಗತಿಕ ಶ್ರೇಷ್ಠತೆಯ ಹಂಚಿಕೆಯ ಅನ್ವೇಷಣೆಯಾಗಿದೆ” ಎಂದು ಹೇಳಿದರು.

ನೆದರ್ಲೆಂಡ್ಸ್2011ರ ನಂತರ ಮತ್ತೊಮ್ಮೆ ಏಕದಿನ ವಿಶ್ವಕಪ್ ಅಭಿಯಾನದ ಭಾಗವಾಗಿರುವ ನೆದರ್‌ಲ್ಯಾಂಡ್ಸ್ ತಂಡದ ಹೆಡ್ ಕೋಚ್ ರಯಾನ್ ಕುಕ್ ಮಾತನಾಡಿ, ”ನಾವು ಭಾರತದಲ್ಲಿ ಎರಡು ಶಿಬಿರಗಳನ್ನು ಹೊಂದಿದ್ದೇವೆ. ಭಾರತೀಯ ಪಿಕ್​ಗಳು ಹವಾಮಾನಕ್ಕೆ ತಕ್ಕಂತೆ ಬಲಾಗಲಿದ್ದು, ನಮ್ಮ ತಂಡವು ಸ್ಪಿನ್ ಬೌಲಿಂಗ್‌ಗೆ ಹೆಚ್ಚು ಆದ್ಯತೆ ನೀಡಲಿದ್ದೇವೆ” ಎಂದರು.

ಬೆಂಗಳೂರಿನಲ್ಲಿರುವ ನೆದರ್ಲೆಂಡ್ಸ್ ತಂಡ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ತಂಡದೊಂದಿಗೆ ಅಭ್ಯಾಸ ಪಂದ್ಯವಾಡಿದ್ದು, 142 ರನ್‌ಗಳಿಂದ ಪರಾಜಯಗೊಂಡಿದೆ.