Thursday, 12th December 2024

ನೆದರ್ಲೆಂಡ್ಸ್’ಗೆ ಸೋಲು: ಭಾರತ ಸೆಮಿಫೈನಲ್’ಗೆ

ವದೆಹಲಿ: ಎರಡು ಬಾರಿಯ ಚಾಂಪಿಯನ್ ಭಾರತ ತಂಡ ಜೂನಿಯರ್ ಹಾಕಿ ವಿಶ್ವಕಪ್’ನ ಕ್ವಾರ್ಟರ್ ಫೈನಲ್’ನಲ್ಲಿ ನೆದರ್ಲೆಂಡ್ಸ್ ತಂಡವನ್ನು 4-3 ಗೋಲುಗಳಿಂದ ಮಣಿಸಿದ ಭಾರತ ಸೆಮಿಫೈನಲ್ ಪ್ರವೇಶಿಸಿದೆ.

ಮಲೇಷ್ಯಾದಲ್ಲಿ ನಡೆದ ಎಫ್‌ಐಎಚ್ ಪುರುಷರ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಅದ್ಭುತವಾಗಿದೆ. ಸೆಮಿಫೈನಲ್ ಪಂದ್ಯಗಳು ಗುರುವಾರ ನಡೆಯ ಲಿದ್ದು, ಫೈನಲ್ ಪಂದ್ಯ ಶನಿವಾರ ನಡೆಯಲಿದೆ.

ಭಾರತ ಗುರುವಾರ ನಡೆಯಲಿರುವ ಸೆಮಿಫೈನಲಿನಲ್ಲಿ ಜರ್ಮನಿಯನ್ನುಎದುರಿಸಲಿದೆ.

ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವು ತುಂಬಾ ರೋಮಾಂಚನಕಾರಿಯಾಗಿತ್ತು. ಮೊದಲಾರ್ಧದಲ್ಲಿ ಡಚ್ ತಂಡ 2. ಭಾರತವು 0 ರಿಂದ ಮುಂದಿತ್ತು. ಬಳಿಕ ಭಾರತವು ಪುನರಾಗಮನ ಮಾಡಿತು. ದ್ವಿತೀಯಾರ್ಧದಲ್ಲಿ ನಾಲ್ಕು ಗೋಲುಗಳನ್ನ ಗಳಿಸಿತು.