ನವದೆಹಲಿ: ವಿಶ್ವಕಪ್ನ 24ನೇ ಪಂದ್ಯ ಬುಧವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರಾಳಿ ನೆದರಲ್ಯಾಂಡಿಗೆ ಗೆಲ್ಲಲು 4೦೦ ರನ್ ಗಳ ಅಸಾಧ್ಯ ಗುರಿ ನೀಡಿದೆ.
ಆಸೀಸ್ ತಂಡಕ್ಕೆ ಆರಂಭಿಕ ಡೇವಿಡ್ ವಾರ್ನರ್ ಹಾಗೂ ಸ್ಪೋಟಕ ಆಟಗಾರ ಗ್ಲೆನ್ ಮ್ಯಾಕ್ಸ್’ವೆಲ್ ಶತಕ ಸಿಡಿಸಿ ತಂಡದ ಮೊತ್ತ ಏರಲು ನೆರವಾದರು. ಮ್ಯಾಕ್ಸ್’ವೆಲ್ ಬ್ಯಾಟಿನಿಂದ ೮ ಸಿಕ್ಸ್ರ್ ಹಾಗೂ ಒಂಬತ್ತು ಬೌಂಡರಿ ಹರಿದು ಬಂದಿದ್ದು, ನೆದರಲ್ಯಾಂಡ್ ಬೌಲಿಂಗ ನೀರಸವಾಗಿತ್ತು. ಮಾಜಿ ನಾಯಕ ಸ್ಮಿತ್ ಹಾಗೂ ಲ್ಯಾಬುಶ್ಗನ್ನೆ ಅರ್ಧಶತಕ ಸಿಡಿಸಿ, ರನ್ ಏರಲು ಸಾಥ್ ನೀಡಿದರು. ಮಿಚೆಲ್ 9 ರನ್ನಿಗೆ ಔಟಾದರೂ, ನಂತರದ ಆಸೀಸ್ ಇನ್ನಿಂಗ್ಸ್’ನಲ್ಲಿ ರನ್ನುಗಳ ಸುರಿಮಳೆ.
ನೆದರಲ್ಯಾಂಡ್ ಬೌಲರುಗಳ ಪೈಕಿ ಲೀಡೆ ತಮ್ಮ ಹತ್ತು ಓವರುಗಳ ಕೋಟಾದಲ್ಲಿ 115 ಬಿಟ್ಟುಕೊಟ್ಟು ಕೆಟ್ಟ ದಾಖಲೆಗೆ ಕಾರಣರಾದರು.
ವಿಶ್ವಕಪ್ ಟೂರ್ನಿಯಲ್ಲಿ ಉಭಯ ತಂಡಗಳು ತಲಾ 4 ಪಂದ್ಯಗಳನ್ನು ಆಡಿವೆ. ಈ ಪೈಕಿ ಆಸ್ಟ್ರೇಲಿಯಾ 2ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ನೆದರ್ಲೆಂಡ್ ಒಂದರಲ್ಲಿ ಗೆದ್ದು ಏಳನೇ ಸ್ಥಾನದಲ್ಲಿದೆ.
ನೆದರ್ಲೆಂಡ್: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡ್, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್(ನಾಯಕ ಮತ್ತು ವಿ.ಕೀ), ಸೈಬ್ರಾಂಡ್ ಎಂಗಲ್‌ಬ್ರೆಕ್ಟ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್