Monday, 16th September 2024

ವಿಲಿಯಮ್ಸನ್ ದ್ವಿಶತಕ: ನ್ಯೂಜಿಲೆಂಡ್ ಇನ್ನಿಂಗ್ಸ್ ಡಿಕ್ಲೇರ್

ಕರಾಚಿ: ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಪಾಕಿಸ್ತಾನದ ವಿರುದ್ಧದ ಸರಣಿಯ ಮೊದಲ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ್ದಾರೆ.

ವಿಲಿಯನ್ಸನ್ ದ್ವಿಶತಕದ ನೆರವಿನಿಂದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 612 ರನ್ ಗಳಿಸಿದ್ದಾಗ 174 ರನ್ ಮುನ್ನಡೆಯೊಂದಿಗೆ ಡಿಕ್ಲೇರ್ ಮಾಡಿ ಕೊಂಡಿತು. ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿತು. ಮೊದಲ ಇನ್ನಿಂಗ್ಸ್‌ ನಲ್ಲಿ ಪಾಕಿಸ್ತಾನ 438 ರನ್ ಗಳಿಸಿ ಆಲೌಟ್ ಆಯಿತು.

ಪಾಕಿಸ್ತಾನ ನಾಯಕ ಬಾಬರ್ ಅಜಂ 161 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಅಘಾ ಸಲ್ಮಾನ್ ಕೂಡ 103 ರನ್, ಸರ್ಫರಾಜ್ 86 ರನ್ ಗಳಿಸಿ ಸಾಥ್ ನೀಡಿದರು. ಅಂತಿಮವಾಗಿ ಪಾಕಿಸ್ತಾನ 438 ರನ್‌ಗಳಿಗೆ ಆಲೌಟ್ ಆಯಿತು.

ನ್ಯೂಜಿಲೆಂಡ್ ಪರವಾಗಿ ಟಿಮ್ ಸೌಥಿ 3 ವಿಕೆಟ್ ಪಡೆದರು. ಅಜಾಜ್ ಪಟೇಲ್, ಬ್ರಾಸ್‌ವೆಲ್, ಇಶ್ ಸೋಧಿ ತಲಾ 2 ವಿಕೆಟ್ ಪಡೆದರು. ವ್ಯಾಗ್ನರ್ ಒಂದು ವಿಕೆಟ್ ಪಡೆದರು. ನ್ಯೂಜಿ ಲೆಂಡ್ ಅತ್ಯುತ್ತಮ ಆರಂಭ ಪಡೆಯಿತು. ಟಾಮ್ ಲಥಮ್ ಮತ್ತು ಡಿವೋನ್ ಕಾನ್ವೆ ಮೊದಲ ವಿಕೆಟ್‌ಗೆ 183 ರನ್‌ಗಳ ಜೊತೆಯಾಟ ಆಡಿದರು.

395 ಎಸೆತಗಳಲ್ಲಿ 21 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ ಅಜೇಯ 200 ರನ್ ಗಳಿಸಿದರು. ವಿಲಿಯಮ್ಸನ್ ದ್ವಿಶತಕ ಗಳಿಸುತ್ತಿದ್ದಂತೆ ನ್ಯೂಜಿಲೆಂಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಕೇನ್ ವಿಲಿಯಮ್ಸನ್ 5ನೇ ದ್ವಿಶತಕ ಗಳಿಸುವ ಮೂಲಕ ಮತ್ತೆ ಫಾರ್ಮ್‌ಗೆ ಮರಳಿದರು.

ಪಾಕಿಸ್ತಾನದ ಪರವಾಗಿ ಅಬ್ರಾರ್ ಅಹ್ಮದ್ 5 ವಿಕೆಟ್ ಪಡೆದು ಮಿಂಚಿದರು. ನೌಮನ್ ಅಲಿ 3 ವಿಕೆಟ್ ಪಡೆದರೆ, ಮೊಹಮ್ಮದ್ ವಾಸಿಂ ಜ್ಯೂನಿಯರ್ ಒಂದು ವಿಕೆಟ್ ಪಡೆದರು.

 
Read E-Paper click here