ಬೆಂಗಳೂರು: ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಮೊದಲ ಬೌಲಿಂಗ್ ಮಾಡಲು ಇಚ್ಛಿಸಿದ್ದಾರೆ. ಕುಸಾಲ್ ಮೆಂಡಿಸ್ ಪಡೆಗೆ ಬ್ಯಾಟಿಂಗ್ ಮಾಡಲು ಆಹ್ವಾನವಿತ್ತರು.
2023ರ ವಿಶ್ವಕಪ್ ಅಭಿಯಾನದ 41ನೇ ಪಂದ್ಯ ಇದಾಗಿದ್ದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿಕೊಂಡಿದೆ.
ಶ್ರೀಲಂಕಾ ಕಳಪೆ ಬ್ಯಾಟಿಂಗ್: ಸೆಮಿ ಹಂತಕ್ಕೆ ತಲುಪಲು ಜಯ ಅಗತ್ಯವಾಗಿದ್ದ ಈ ಪಂದ್ಯದಲ್ಲಿ ಲಂಕಾ ಪಾಳೆಯ 171 ರನ್ನಿಗೆ ಆಲೌಟಾಗಿದೆ. ಆರಂಭಿಕ ಕುಸಲ್ ಪೆರೆರಾ 51 ಹೊಡೆದಿದ್ದು, ತಂಡದಲ್ಲಿನ ಏಕೈಕ ಅರ್ಧಶತಕವಾಗಿದೆ. ಬಳಿಕ ಸ್ಪಿನ್ನರ್ ಮಹೀಶ್ 38 ಗಳಿಸಿದ್ದು, ನಂತರದ ಗರಿಷ್ಠ ಮೊತ್ತ. ಕಿವೀಸ್ ಪರ ವೇಗಿ ಬೌಲ್ಟ್ ಮೂರು ಹಾಗೂ ಫರ್ಗ್ಯೂಸನ್, ಸ್ಯಾಂಟನರ್ ಹಾಗೂ ರಚಿನ್ ತಲಾ ಎರಡು ವಿಕೆಟ್ ಕಬಳಿಸಿದರು.
ಲಂಕಾ, ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಗಿಟ್ಟಿಸಲು ಇಂದಿನ ಗೆಲುವು ಅನಿವಾರ್ಯ. ಮತ್ತೊಂದೆಡೆ ಸೆಮಿಫೈನಲ್‌ಗೇರುವ ತವಕ ದಲ್ಲಿರುವ ವಿಲಿಯಮ್ಸನ್ ಪಡೆಗೂ ಈ ಗೆಲುವು ಅವಶ್ಯಕ. ಉಭಯ ತಂಡಗಳಿಗೆ ಇಂದಿನ ಪಂದ್ಯ ಮಹತ್ವದ್ದಾಗಿದ್ದರಿಂದ ಕುತೂಹಲ ಮೂಡಿಸಿದೆ. ಸೆಮಿಫೈನಲ್ ಪ್ರವೇಶಕ್ಕಾಗಿ ನ್ಯೂಜಿಲ್ಯಾಂಡ್, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳು ತೀವ್ರ ಪೈಪೋಟಿ ನಡೆಸಿದ್ದು ಇಂದಿನ ಪಂದ್ಯ ಕಿವೀಸ್ ಪಾಲಾದರೆ ಭಾಗಶಃ ಒಳ ಬರಲಿದೆ.
ಶ್ರೀಲಂಕಾ (ಆಡುವ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಲ್ ಮೆಂಡಿಸ್ (ನಾಯಕ/ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚಮಿಕಾ ಕರುಣರತ್ನೆ, ಮಹೇಶ್ ತೀಕ್ಷಣ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.