Monday, 25th November 2024

ಕ್ರೀಡೆಯಲ್ಲಿ ಸೋತವರು ಯಾರೂ ಇಲ್ಲ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಚೆನ್ನೈನ ಜವಾಹರ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಚೆಸ್ ಒಲಿಂಪಿಯಾಡ್ -2022ರ 44ನೇ ಋತುವನ್ನ ಗುರುವಾರ ಉದ್ಘಾಟಿಸಿ, , ‘ಕ್ರೀಡೆಯಲ್ಲಿ, ಸೋತವರು ಯಾರೂ ಇಲ್ಲ, ವಿಜೇತರು ಇದ್ದಾರೆ ಮತ್ತು ಭವಿಷ್ಯದ ವಿಜೇತರು ಇದ್ದಾರೆ’ ಎಂದು ಹೇಳಿದರು.

2020ರ ಆನ್ಲೈನ್ ಒಲಿಂಪಿಯಾಡ್‌ನಲ್ಲಿ ಭಾರತವು ರಷ್ಯಾ ದೊಂದಿಗೆ ಜಂಟಿ ವಿಜೇತವಾಗಿತ್ತು. ಈ ಬಾರಿ ಚೆಸ್ ಒಲಿಂಪಿಯಾಡ್‌ ನಲ್ಲಿ ಮುಕ್ತ ವಿಭಾಗದಲ್ಲಿ ದಾಖಲೆಯ 187 ದೇಶಗಳ ತಂಡಗಳು ಮತ್ತು ಮಹಿಳಾ ವಿಭಾಗದಲ್ಲಿ 162 ತಂಡಗಳು ಭಾಗವಹಿಸು ತ್ತಿವೆ.

ಪಾಕಿಸ್ತಾನವು 44ನೇ ಚೆಸ್ ಒಲಿಂಪಿಯಾಡ್‌ನಿಂದ ಹೊರ ಬಂದಿದೆ. ಇನ್ನು ಪಾಕ್ ತಂಡವು ಭಾರತವನ್ನ ತಲುಪಿರುವ ಸಮಯ ದಲ್ಲಿ ಪಾಕಿಸ್ತಾನವು ಈ ನಿರ್ಧಾರ ತೆಗೆದುಕೊಂಡಿದೆ.

ಇದೇ ಮೊದಲ ಬಾರಿ ಭಾರತದಲ್ಲಿ ಅಂತಾರಾಷ್ಟ್ರೀಯ ಚೆಸ್​​ ಕ್ರೀಡಾಕೂಟ ಆಯೋಜನೆಗೊಂಡಿದ್ದು, ಆತಿಥೇಯ ಭಾರತಕ್ಕೆ ಇದೊಂದು ಪ್ರತಿಷ್ಠೆಯ ಪಂದ್ಯಾವಳಿ.

ತಮಿಳುನಾಡು ಚೆಸ್‌ನೊಂದಿಗೆ ಬಲವಾದ ಐತಿಹಾಸಿಕ ಸಂಬಂಧವನ್ನು ಹೊಂದಿದೆ. ರಾಜ್ಯವು ಅನೇಕ ಚೆಸ್ ಪಟು ಗಳನ್ನು ಸೃಷ್ಟಿಸಿದೆ. ಇದು ರೋಮಾಂಚಕ ಸಂಸ್ಕೃತಿಯ ನೆಲೆಯಾಗಿದೆ ಮತ್ತು ಅತ್ಯಂತ ಹಳೆಯ ಭಾಷೆ ‘ತಮಿಳು’ ಎಂದು ಪ್ರಧಾನಿ ಮೋದಿ ಬಣ್ಣಿಸಿದರು. ಮುಖ್ಯಮಂತ್ರಿ ಎಂಕೆ ಸ್ಟಾಲಿನ್​, ಸೂಪರ್ ಸ್ಟಾರ್ ರಜನಿಕಾಂತ್, ಕ್ರೀಡಾ ಸಚಿವ ಅನೂರಾಗ್​ ಠಾಕೂರ್​, ಚೆಸ್​ ಚಾಂಪಿಯನ್​ ವಿಶ್ವನಾಥನ್​ ಆನಂದ್​ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಆ. 10ರವರೆಗೆ ಸ್ಪರ್ಧೆ ನಡೆಯಲಿದೆ.

5 ಬಾರಿಯ ವಿಶ್ವ ಚಾಂಪಿಯನ್​ ಹಾಗೂ ಸ್ಥಳೀಯ ತಾರೆ ವಿಶ್ವನಾಥನ್​ ಆನಂದ್​ ಈ ಬಾರಿ ಟೂರ್ನಿಯಲ್ಲಿ ಆಡುತ್ತಿಲ್ಲ.