ಮುಂಬೈ: ಇದೇ ಮೊದಲ ಬಾರಿಗೆ ರಣಜಿ ಕ್ರಿಕೆಟ್ ಟೂರ್ನಿ ರದ್ದು( 87 ವರ್ಷಗಳ ಬಳಿಕ) ಪಡಿಸಿರುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿದೆ.
ವಿಜಯ್ ಹಜಾರೆ ಟ್ರೋಫಿ ನಡೆಸಲು ಎಲ್ಲ ರಾಜ್ಯಗಳ ಕ್ರಿಕೆಟ್ ಮಂಡಳಿಗಳು ಒಲವು ತೋರಿಸಿವೆ. ಜತೆಗೆ, ಕೊರೊನಾ ಹರಡುವಿಕೆ ಗಮನದಲ್ಲಿಟ್ಟುಕೊಂಡು ಪ್ರಸಕ್ತ ವರ್ಷದ ರಣಜಿ ಟೂರ್ನಿ ನಡೆಸದಿರಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಹತ್ತೊಂಬತ್ತು ವರ್ಷದೊಳಗಿನವರ (U-19) ಏಕದಿನ ಕ್ರಿಕೆಟ್ ಟೂರ್ನಿ, ಮಹಿಳೆಯರ ಏಕದಿನ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸುವ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.
ಫೆಬ್ರವರಿ 5ರಿಂದ ಭಾರತ-ಇಂಗ್ಲೆಂಡ್ ಕ್ರಿಕೆಟ್ ಸರಣಿ ಆರಂಭವಾಗಿದೆ. ತಂಡಗಳು 4 ಟೆಸ್ಟ್, 3 ಏಕದಿನ, 5 ಟಿ-20 ಪಂದ್ಯಗಳನ್ನು ಆಡಲಿವೆ.