ಲಂಡನ್: ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್ ವರ್ಷಾಂತ್ಯದ ಎಟಿಪಿ ಶ್ರೇಯಾಂಕದಲ್ಲಿ 8ನೇ ಬಾರಿಗೆ ನಂ.1 ಸ್ಥಾನವನ್ನು ಅವರು ತನ್ನಲ್ಲೇ ಉಳಿಸಿ ಕೊಂಡಿದ್ದಾರೆ.
ಪುರುಷರ ವಿಭಾಗದಲ್ಲಿ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಪ್ರಶಸ್ತಿ ಗೆದ್ದ ಪಟ್ಟವೂ ನೊವಾಕ್ ಹೆಸರಿನಲ್ಲಿದೆ.
36 ವರ್ಷದ ನೊವಾಕ್, ಈ ವರ್ಷದ ಪ್ರವಾಸದಲ್ಲಿ ಯುವ ಆಟಗಾರ ಕಾರ್ಲೋಸ್ ಅಲ್ಕರಾಜ್ ಜೊತೆಗೆ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಲೇ ಬಂದರು. ಜುಲೈನಲ್ಲಿ ಆಲ್ ಇಂಗ್ಲೆಂಡ್ ಕ್ಲಬ್ನಲ್ಲಿ ನಡೆದ ಐದು ಸೆಟ್ಗಳ ಫೈನಲ್ನಲ್ಲಿ ಜೊಕೊವಿಚ್ ಅವರು ಕಾರ್ಲೋಸ್ ಅಲ್ಕರಾಜ್ ಅವರನ್ನು ಮಣಿಸಿ ನಂ.1 ಸ್ಥಾನಕ್ಕೆ ಮರಳಿದ್ದರು. 2021ರಲ್ಲಿ ವರ್ಷಾಂತ್ಯಕ್ಕೆ ನೊವಾಕ್ ಅಗ್ರಸ್ಥಾನ ಪಡೆದಿದ್ದರು. ಎರಡು ವರ್ಷದ ನಂತರ ಮತ್ತೆ ಅದೇ ಸ್ಥಾನವನ್ನು ಅವರು ಅಲಂಕರಿಸಿದ್ದಾರೆ. 2024 ಜನವರಿ 22ರವರೆಗೆ ಅಗ್ರ ಶ್ರೇಯಾಂಕಿತರಾಗಿಯೇ ಉಳಿಯಲಿದ್ದಾರೆ.
ಡಬ್ಲ್ಯೂಟಿಎ ಫೈನಲ್ಸ್ ಗೆಲ್ಲುವ ಮೂಲಕ ಇಗಾ ಸ್ವಿಯಾಟೆಕ್ ಡಬ್ಲ್ಯೂಟಿಎಯ ವರ್ಷಾಂತ್ಯದಲ್ಲಿ ನಂ.1 ಶ್ರೇಯಾಂಕಕ್ಕೇರಿದ್ದರು. ಎರಡನೇ ಬಾರಿಗೆ ಇಗಾ ವರ್ಷಾಂತ್ಯದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.