Sunday, 24th November 2024

Novak Djokovic: ಎದುರಾಳಿಯನ್ನೇ ಕೋಚ್‌ ಮಾಡಿಕೊಂಡ ನೊವಾಕ್‌ ಜೊಕೋವಿಕ್‌

ಲಂಡನ್‌: ಒಂದು ಕಾಲದಲ್ಲಿ ಬುದ್ಧ ಎದುರಾಳಿಯಾಗಿ ಟೆನಿಸ್‌ ಕೋರ್ಟ್‌ನಲ್ಲಿ ಪ್ರತಿ ಸ್ಪರ್ಧಿಯಾಗಿದ್ದ ಬ್ರಿಟನ್ನಿನ ಆ್ಯಂಡಿ ಮರ್ರೆ(Andy Murray) ಅವರನ್ನು 24 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ವಿಜೇತ ನೊವಾಕ್‌ ಜೊಕೋವಿಕ್‌(Novak Djokovic) ತಮ್ಮ ಕೋಚ್‌ ಆಗಿ ನೇಮಿಸಿಕೊಂಡಿದ್ದಾರೆ. 2025ರ ಮೊದಲ ಗ್ರ್ಯಾನ್‌ಸ್ಲಾಮ್‌ ಟೂರ್ನಿಯಾದ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಲ್ಲಿ ಜೋಕೊ ಅವರು ಮರ್ರೆ ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿದ್ದಾರೆ.

ʼನನ್ನ ಪ್ರಮುಖ ಪ್ರತಿಸ್ಪರ್ಧಿ ಮರ್ರೆ ಜತೆ ಕೋಚಿಂಗ್‌ ಪಡೆಯಲು ನಾನು ಕಾತರದಿಂದ ಕಾಯುತ್ತಿದ್ದೇನೆʼ ಎಂದು ಜೋಕೊ ಹೇಳಿದ್ದಾರೆ. ಆ್ಯಂಡಿ ಮರ್ರೆ ಇದೇ ವರ್ಷ ನಡೆದಿದ್ದ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಆಡಿ ವಿದಾಯ ಹೇಳಿದ್ದರು. ಜೋಕೊ ಮತ್ತು ಮರ್ರೆ ಮರ್ರೆ ಒಂದು ವರ್ಷದ ಹಿಂದೆ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ಜೂನ್‌ನಲ್ಲಿ ಮತ್ತೆ ಟೆನಿಸಿಗೆ ಮರಳಿದರೂ 2018 ಋತುವಿನಲ್ಲಿ ಪೂರ್ತಿಯಾಗಿ ಆಡಲು ಸಾಧ್ಯವಾಗಿರಲಿಲ್ಲ.

ಆ್ಯಂಡಿ ಮರ್ರೆ ಮತ್ತು ಜೋಕೊ ವೃತ್ತಿಪರ ಟೆನಿಸ್‌ನಲ್ಲಿ ಒಟ್ಟು 36 ಬಾರಿ ಮುಖಾಮುಖಿಯಾಗಿದ್ದರು. ಈ ವೇಳೆ ಜೋಕೊ 25 ಬಾರಿ ಗೆದ್ದಿದ್ದಾರೆ. ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಫೈನಲ್‌ನಲ್ಲಿ 10 ಬಾರಿ ಎದುರಾಗಿದ್ದು ಜೋಕೊ 8 ಬಾರಿ ಗೆದ್ದಿದ್ದಾರೆ.

ವಿಶ್ವ ದಾಖಲೆ ಬರೆದ ತಿಲಕ್‌ ವರ್ಮಾ

ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡು ಟಿ20ಐ ಶತಕಗಳನ್ನು ಸಿಡಿಸಿದ್ದ ಭಾರತ ತಂಡದ ಯುವ ಬ್ಯಾಟ್ಸ್‌ಮನ್‌ ತಿಲಕ್‌ ವರ್ಮಾ ಇದೀಗ ಮತ್ತೊಂದು ಟಿ20 ಶತಕವನ್ನು (Syed Mushtaq Ali Trophy) ಸಿಡಿಸಿದ್ದಾರೆ. ಆ ಮೂಲಕ ಸತತ ಮೂರು ಟಿ20 ಶತಕಗಳನ್ನು ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ನೂತನ ದಾಖಲೆಯನ್ನು ತಿಲಕ್‌ ವರ್ಮಾ ಬರೆದಿದ್ದಾರೆ.

ಶನಿವಾರ ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಮೇಘಾಲಯ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಹೈದರಾಬಾದ್‌ ಪರ ತಿಲಕ್‌ ವರ್ಮಾ, ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಇವರು ಎದುರಿಸಿದ ಕೇವಲ 67 ಎಸೆತಗಳಲ್ಲಿ ಬರೋಬ್ಬರಿ 10 ಸಿಕ್ಸರ್‌ ಹಾಗೂ 14 ಬೌಂಡರಿಗಳೊಂದಿಗೆ 151 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಭಾರತೀಯ ಟಿ20 ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಸಿಡಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಇದರೊಂದಿಗೆ ಮುಂಬೈ ತಂಡದ ಶ್ರೇಯಸ್‌ ಅಯ್ಯರ್‌ ಅವರ ದಾಖಲೆಯನ್ನು ಮುರಿದಿದ್ದಾರೆ. ಶ್ರೇಯಸ್‌ ಅಯ್ಯರ್‌ ಈ ಹಿಂದೆ 147 ರನ್‌ಗಳನ್ನು ಸಿಡಿಸಿದ್ದರು.