ಅಡಿಲೇಡ್: ಓವಲ್ ಮೈದಾನದಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ಗೆಲ್ಲುವ ಮೂಲಕ ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ.
ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ಗ್ರೂಪ್ 1ರಿಂದ ಸೆಮೀಸ್ ಪ್ರವೇಶಿ ಸಿದೆ. 186 ರನ್‌ಗಳ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 150 ರನ್‌ಗಳಿಸಲಷ್ಟೇ ಶಕ್ತಗೊಂಡಿತು.
ಟಾಸ್ ಸೋತು ಬ್ಯಾಟಿಂಗ್ ಇಳಿದ ನ್ಯೂಜಿಲೆಂಡ್ ಪರ ಫಿನ್ ಅಲೆನ್ 32, ಡೆವೊನ್ ಕಾನ್ವೆ 28, ನಾಯಕ ಕೇನ್ ವಿಲಿಯಮ್ಸನ್ 61, ಗ್ಲೆನ್ ಫಿಲಿಪ್ಸ್ 17, ಡೆರಿಲ್ ಮಿಚೆಲ್ ಅಜೇಯ 31ರನ್‌ಗಳ ನೆರವಿನಿಂದ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 185 ರನ್ ಕಲೆ ಹಾಕಿತು.
ಕೇನ್ ವಿಲಿಯಮ್ಸನ್ 64 ರನ್ ಕಲೆ ಹಾಕಿ, ತಂಡವನ್ನು 200ರ ಗಡಿ ಮುಟ್ಟಿಸಬೇಕೆಂದು ಪಣತೊಟ್ಟಿದ್ದರು. 19ನೇ ಓವರ್‌ನಲ್ಲಿ ಜೋಶ್ ಲಿಟಲ್ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಮೂಲಕ ರನ್ ವೇಗಕ್ಕೆ ಕಡಿವಾಣ ಹಾಕಿದರು. ವಿಲಿಯಮ್ಸನ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್ ಸತತ ಮೂರು ಎಸೆತಗಳಲ್ಲಿ ಔಟಾದ ಪರಿಣಾಮ ನ್ಯೂಜಿಲೆಂಡ್ 6 ವಿಕೆಟ್ ಕಳೆದುಕೊಂಡು 185ರನ್ ಕಲೆ ಹಾಕಿತು.
ಜೋಸ್ ಲಿಟರ್ ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಎರಡನೇ ಬೌಲರ್ ಆಗಿದ್ದು, ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ಐರ್ಲೆಂಡ್ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ಗ್ರೂಪ್ 1 ಪಾಯಿಂಟ್ಸ್ ಟೇಬಲ್‌ನಲ್ಲಿ ಆಡಿರುವ 7 ಪಂದ್ಯಗಳಲ್ಲಿ 3 ಗೆಲುವು, 1 ಸೋಲು ಮತ್ತು 1 ಫಲಿತಾಂಶವಿಲ್ಲದೆ ಒಟ್ಟು 7 ಪಾಯಿಂಟ್ಸ್ ಕಲೆಹಾಕಿದ್ದು, ನೆಟ್ ರನ್‌ರೇಟ್ +2.113ರಷ್ಟು ಹೊಂದಿದೆ.
ಒಟ್ಟು 3 ಪಾಯಿಂಟ್ಸ್ ಕಲೆ ಹಾಕಿ ಗ್ರೂಪ್ 5 ಸ್ಥಾನದಲ್ಲಿ ಟಿ20 ವಿಶ್ವಕಪ್ ಕೊನೆಗೊಳಿಸಿದೆ.