Saturday, 14th December 2024

NZ vs ENG: ಚೆಂಡು ತಡೆಯಲು ಹೋಗಿ ವಿಕೆಟ್‌ ಕಳೆದುಕೊಂಡ ವಿಲಿಯಮ್ಸನ್‌; ಇಲ್ಲಿದೆ ವಿಡಿಯೊ

ಹ್ಯಾಮಿಲ್ಟನ್‌: ಇಂಗ್ಲೆಂಡ್‌(NZ vs ENG) ವಿರುದ್ಧ ಸಾಗುತ್ತಿರುವ ಮೂರನೇ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡದ ಅನುಭವಿ ಆಟಗಾರ ಕೇನ್‌ ವಿಲಿಯಮ್ಸನ್‌(Kane Williamson) ಅವರು ವಿಚಿತ್ರವಾಗಿ ಔಟ್ ಆದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Cricket Viral Video)​ ಆಗಿದೆ. ಕಾಲಿನಿಂದ ಚೆಂಡನ್ನು ತಡೆಯುವ ಯತ್ನದಲ್ಲಿ ವಿಕೆಟ್‌ ಕಳೆದುಕೊಂಡು ಅನ್‌ಲಕ್ಕಿ ಎನಿಸಿಕೊಂಡರು.

44 ರನ್‌ ಗಳಿಸಿದಿದ್ದ ವೇಳೆ ಮ್ಯಾಥ್ಯೂ ಪಾಟ್ಸ್ ಎಸೆದ ಚೆಂಡನ್ನು ವಿಲಿಯಮ್ಸನ್‌ ಡಿಫೆನ್ಸ್‌ ಮಾಡಿದರು. ಆದರೆ ಚೆಂಡು ಒಂದು ಪಿಚ್‌ ಆಗಿ ವಿಕೆಟ್‌ ಕಡೆ ಸಾಗಿತು. ಈ ವೇಳೆ ವಿಲಿಯಮ್ಸನ್‌ ಅವಸರದಲ್ಲಿ ಕಾಲಿನಿಂದ ಚೆಂಡನ್ನು ತಡೆಯಲು ಪ್ರಯತ್ನಿಸಿದರು. ಚೆಂಡಿಗೆ ಕಾಲು ರಭಸವಾಗಿ ಬಡಿದ ಕಾರಣ ಚೆಂಡು ವಿಕೆಟ್‌ಗೆ ಬಡಿದು ಔಟ್‌ ಆದರು. ಸದ್ಯ ಈ ವಿಡಿಯೊ ‘ಅನ್‌ಲಕ್ಕಿ ವಿಲಿಯಮ್ಸನ್‌’ ಎಂಬ ಹ್ಯಾಶ್‌ ಟ್ಯಾಗ್‌ನಿಂದ ವೈರಲ್‌ ಆಗುತ್ತಿದೆ.

ಕಾಲಿನಿಂದ ಚೆಂಡು ತಡೆಯಬಹುದೇ?

ಬೌಲರ್​ ಒಬ್ಬ ಎಸೆದ ಎಸೆತ ಬ್ಯಾಟ್​ಗೆ ಬಡಿದು ಚೆಂಡು ವಿಕೆಟ್​ಗೆ ಬಡಿಯುವ ಮುನ್ನ ಬ್ಯಾಟ್​ನಿಂದ ಅಥವಾ ಕಾಲಿನಿಂದ ಇದನ್ನು ತಡೆದರೆ ಇದನ್ನು ಔಟ್​ ಎಂದು ಪರಿಗಣಿಸುವುದಿಲ್ಲ. ಈ ನಿಯಮ ಐಸಿಸಿಯಲ್ಲಿದೆ. ಆದರೆ ಕೈಗಳಿಂದ ಚೆಂಡನ್ನು ತಡೆದರೆ ಇದನ್ನು ಔಟ್​ ಎಂದು ಒಂದು ತೀರ್ಪು ನೀಡಲಾಗುತ್ತದೆ. ಒಂದೊಮ್ಮೆ ಬ್ಯಾಟರ್​ ಕ್ರೀಸ್​ ಬಿಟ್ಟು ಮುಂದೆ ಬಂದ ವೇಳೆ ಫೀಲ್ಡರ್​ ಒಬ್ಬ ವಿಕೆಟ್​ನತ್ತ ಚೆಂಡನ್ನು ಎಸೆದರೆ ಅದನ್ನು ಬ್ಯಾಟರ್​ ತಡೆದರೆ ಇದು ಕೂಡ ಔಟ್​ ಎಂದು ನಿರ್ಧರಿಸಲಾಗುತ್ತದೆ.

ಈಗಾಗಲೇ 2 ಪಂದ್ಯಗಳನ್ನು ಸೋತಿರುವ ನ್ಯೂಜಿಲ್ಯಾಂಡ್‌ ತವರಿನಲ್ಲಿ ಕ್ಲೀನ್‌ಸ್ವೀಪ್‌ ಮುಖಭಂಗದಿಂದ ಪಾರಾಗಬೇಕಿದ್ದರೆ ಮೂರನೇ ಪಂದ್ಯವನ್ನು ಗೆಲ್ಲಲ್ಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಮೂರನೇ ಪಂದ್ಯದಲ್ಲಿ ಬ್ಯಾಟಿಂಗ್‌ ನಡೆಸುತ್ತಿರುವ ಕಿವೀಸ್‌ ಮೊದಲ ಇನಿಂಗ್ಸ್‌ನಲ್ಲಿ ಬೃಹತ್‌ ಮೊತ್ತ ಪೇರಿಸುವ ಹಂತದಲ್ಲಿ ಬ್ಯಾಟಿಂಗ್‌ ನಡೆಸುತ್ತಿದೆ.