Thursday, 12th December 2024

ನ್ಯೂಜಿಲೆಂಡ್ – ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯ ಟ್ರೋಫಿಗಿದೆ ಇತಿಹಾಸ…!

ಮೌಂಟ್ ಮ್ಯಾಗ್ನೂಯಿ: ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡು ಟೆಸ್ಟ್‌ಗಳ ಟೆಸ್ಟ್ ಸರಣಿ ಫೆ.04 ರಿಂದ ನಡೆಯಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್ಸ್ ಪಟ್ಟಿಯಲ್ಲಿ ಪ್ರಬಲ ಸ್ಥಾನವನ್ನು ಕಾಯ್ದುಕೊಳ್ಳಲು ಉಭಯ ತಂಡಗಳ ನಡುವೆ ರೋಚಕ ಹಣಾಹಣಿ ನಿರೀಕ್ಷಿಸಲಾಗಿದೆ.

ದಕ್ಷಿಣ ಆಫ್ರಿಕಾ ಈ ಸರಣಿಗೆ ಯುವ ತಂಡವನ್ನು ಆಯ್ಕೆ ಮಾಡಿದೆ. ನ್ಯೂಜಿಲೆಂಡ್ ಕ್ರಿಕೆಟ್ ಈ ಸರಣಿಗಾಗಿ ವಿಶೇಷ ಟ್ರೋಫಿಯನ್ನು ಪ್ರಕಟಿಸಿದೆ. ಈ ಟ್ರೋಫಿಯನ್ನು ವಿಜೇತ ತಂಡಕ್ಕೆ ನೀಡಲಾಗುವುದು. ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿರುವ ಟೆಸ್ಟ್ ಸರಣಿಗೆ ತಂಗಿವೈ ಶೀಲ್ಡ್ ಹೆಸರಿನ ಟ್ರೋಫಿಯನ್ನು ಪ್ರಕಟಿಸಲಾಗಿದೆ.

151 ಜೀವಗಳನ್ನು ಬಲಿ ತೆಗೆದುಕೊಂಡ 1953 ರ ತಂಗಿವಾಯಿ ರೈಲು ದುರಂತದ ನಂತರ 70 ವರ್ಷಗಳ ಸ್ಮರಣಾರ್ಥ ಟ್ರೋಫಿ ಇದಾಗಿದೆ.

ಮಾಜಿ ವೇಗದ ಬೌಲರ್ ಬಾಬ್ ಬ್ಲೇರ್ ಅವರ ಪತ್ನಿ ದುರಂತದ 151 ಬಲಿಪಶುಗಳಲ್ಲಿ ಒಬ್ಬರು. 24 ಡಿಸೆಂಬರ್ 1953 ರಂದು ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ರೈನ್‌ಬೋ ನೇಷನ್‌ನಲ್ಲಿ ನಡೆಯುತ್ತಿದ್ದಾಗ ಅಪಘಾತ ಸಂಭವಿಸಿತು.

ಅಪಘಾತದಲ್ಲಿ ಅವರ ಪತ್ನಿ ಸಾವನ್ನಪ್ಪಿದರು. ಬಾಬ್ ಬ್ಲೇರ್ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಡಿದರು ಮತ್ತು ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ ಪಡೆದು 50 ರನ್ ನೀಡಿದರು. ಆದರೆ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದ ನ್ಯೂಜಿಲೆಂಡ್ ತಂಡ ಆ ಪಂದ್ಯದಲ್ಲಿ ಸೋಲು ಅನುಭವಿಸಬೇಕಾ ಯಿತು.

ನ್ಯೂಜಿಲೆಂಡ್ ತಂಡ: ಟಿಮ್ ಸೌಥಿ (ನಾಯಕ), ಟಾಮ್ ಬ್ಲಂಡೆಲ್, ಡೆವೊನ್ ಕಾನ್ವೆ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ವಿಲ್ ಒ’ರೂರ್ಕ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚ್ ಸ್ಯಾಂಟ್ನರ್, ನೀಲ್ ವ್ಯಾಗ್ನರ್, ಕೇನ್ ವಿಲಿಯಮ್ಸನ್, ವಿಲ್ ಯಂಗ್

ದಕ್ಷಿಣ ಆಫ್ರಿಕಾ ತಂಡ: ನೀಲ್ ಬ್ರಾಂಡ್ (ನಾಯಕ), ಡೇವಿಡ್ ಬೆಡಿಂಗ್ಹ್ಯಾಮ್, ರುವಾನ್ ಡಿ ಸ್ವಾರ್ಡ್ಟ್, ಕ್ಲೈಡ್ ಫೋರ್ಚುಯಿನ್ (ವಿಕೆಟ್ ಕೀಪರ್), ಜುಬೈರ್ ಹಮ್ಜಾ, ತ್ಶೆಪೊ ಮೊರೆಕಿ, ಮಿಹಲಾಲಿ ಮ್ಪೊಂಗ್ವಾನಾ, ಡ್ಯುವಾನ್ ಆಲಿವರ್, ಡೇನ್ ಪ್ಯಾಟರ್ಸನ್, ಕೀಗನ್ ಪೀಟರ್ಸನ್, ಡೇನ್ ಪಿಯೆಡ್, ರೆನಾರ್ಡ್ ವ್ಯಾನ್ ಟೋಂಡರ್ ಬರ್ಗ್, ಖಯಾ ಜೊಂಡೋ, ಎಡ್ವರ್ಡ್ ಮೂರ್