Thursday, 12th December 2024

ಏಕದಿನ ಸರಣಿ ಇಂದಿನಿಂದ ಆರಂಭ

ಪಾರ್ಲ್:ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ.ಮೊದಲ ಪಂದ್ಯ ಪಾರ್ಲ್​ನ ಬೋಲ್ಯಾಂಡ್ ಪಾರ್ಕ್​ನಲ್ಲಿ ನಡೆಯಲಿದೆ. ಈ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ. ಈಗಾಗಲೇ,  ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಸರಣಿ ಅಂತ್ಯಕಂಡಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎಲ್ಲ ಏಕದಿನ ಪಂದ್ಯಗಳು ಸ್ಟಾರ್ ಸ್ಫೋರ್ಟ್ಸ್​ ನೆಟ್​ವರ್ಕ್​​ನಲ್ಲಿ ನೇರಪ್ರಸಾರ ಕಾಣಲಿದೆ.

ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಪದಾರ್ಪಣೆ ಮಾಡುವ ಬಗ್ಗೆ ನಾಯಕ ಕೆಎಲ್ ರಾಹುಲ್ ಸುಳಿವು ನೀಡಿದ್ದಾರೆ. ಮುಂದಿನ ಸರಣಿಗಾಗಿ ತಂಡದಲ್ಲಿ ಕೆಲವು ಬದಲಾವಣೆ ಮಾಡಲು ನಾನು ಹೆದರುವುದಿಲ್ಲ. ನಮ್ಮ ಗುರಿ ವಿಶ್ವಕಪ್ ಮೇಲಿದೆ. 6ನೇ ಬೌಲಿಂಗ್ ಆಯ್ಕೆ ಬಹಳ ಮುಖ್ಯವಾಗಿದೆ. ನಮ್ಮಲ್ಲಿ ವೆಂಕಟೇಶ್ ಅಯ್ಯರ್ ಇರುವುದರಿಂದ ಅವರಿಗೆ ಅವಕಾಶ ನೀಡವ ಬಗ್ಗೆ ಯೋಚಿಸುತ್ತೇವೆ. ಮುಂದಿನ ದಿನಗಳಲ್ಲಿ 6ನೇ ಬೌಲರ್ ಆಯ್ಕೆ ಬಹಳ ಮುಖ್ಯ ಪಾತ್ರವಹಿಸಲಿದೆ. ಎಲ್ಲ ತಂಡ ಅದರ ಕಡೆ ಗಮನ ಹರಿಸು ತ್ತಿದೆ”, ಎಂದು ರಾಹುಲ್ ಹೇಳಿದ್ದಾರೆ.

ಉಭಯ ತಂಡಗಳು ಇಂತಿವೆ:

ಭಾರತ ತಂಡ: ಕೆ.ಎಲ್.ರಾಹುಲ್ (ನಾಯಕ), ಜಸ್‌ಪ್ರೀತ್ ಬುಮ್ರಾ (ಉಪ-ನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ಯುಜ್ವೇಂದ್ರ ಚಹಾಲ್, ಆರ್. ಅಶ್ವಿನ್, ಭುವನೇಶ್ವರ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯಂತ್ ಯಾದವ್ ಹಾಗೂ ನವದೀಪ್ ಸೈನಿ.

ದ. ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಕೇಶವ್ ಮಹಾರಾಜ್ (ಉಪನಾಯಕ), ಕ್ವಿಂಟನ್ ಡಿ ಕಾಕ್, ಯನಮಾನ್ ಮಲನ್, ಜುಬೇರ್ ಹಮ್ಜಾ, ಮಾರ್ಕೊ ಯಾನ್ಸನ್, ಸಿಸಂದಾ ಮಂಗ್ಲಾ, ಏಡನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ವೇಯ್ನ್ ಪಾರ್ನೆಲ್, ಆಂಡಿಲ್ ಫೆಹ್ಲುಕ್ವಾಯೊ, ಡ್ವೇಯ್ನ್ ಪ್ರಿಟೋರಿಯಸ್, ಕಾಗಿಸೋ ರಬಡಾ , ತಬ್ರೇಜ್ ಶಂಬಾಡಾ , ರಾಸಿ ವಾನ್ ಡೆರ್ ಡುಸ್ಸೆನ್, ಕೈಲ್ ವೆರೆನ್.