ಟೋಕಿಯೊ: ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು(2016 ರಿಯೋ ಒಲಿಂಪಿಕ್ಸ್) ಮಿಂಚಿನ ಆಟ ಮುಂದು ವರಿಸಿದ್ದು, ಟೋಕಿಯೊ ಒಲಿಂಪಿಕ್ಸ್ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆದಿದ್ದಾರೆ.
ಬುಧವಾರ ನಡೆದ ಮಹಿಳಾ ಸಿಂಗಲ್ಸ್ ‘ಜೆ’ ಗುಂಪಿನ ಪಂದ್ಯದಲ್ಲಿ ಸಿಂಧು, ಹಾಂಕಾಂಗ್ನ ಎನ್ವೈ ಚೆಯುಂಗ್ ವಿರುದ್ಧ 21-9 21-16ರಿಂದ ಗೆಲುವಿನ ನಗೆ ಬೀರಿದರು. ವಿಶ್ವ ನಂ. 34ನೇ ರ್ಯಾಂಕ್ನ ಚೆಯುಂಗ್ ವಿರುದ್ಧದ ಪಂದ್ಯವನ್ನು 35 ನಿಮಿಷದಲ್ಲೇ ವಶಪಡಿಸಿಕೊಂಡರು.
ಭಾರತದ ಭರವಸೆಯ ತಾರೆ ಸಿಂಧು ತಮ್ಮ ಅಮೋಘ ಆಟದ ಮೂಲಕ ಎದುರಾಳಿಯ ಮೇಲೆ ಪಾರಮ್ಯ ಮೆರೆದರು. ಸಿಂಧು, ಪ್ರಿ-ಕ್ವಾರ್ಟರ್ಫೈನಲ್ನಲ್ಲಿ ಡೆನ್ಮಾರ್ಕ್ನ ವಿಶ್ವ ನಂ.12ನೇ ರ್ಯಾಂಕ್ನ ಮಿಯಾ ಬ್ಲೆಚ್ಫೆಲ್ಡ್ ಸವಾಲನ್ನು ಎದುರಿಸಲಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಆರನೇ ಶ್ರೇಯಾಂಕಿತೆ ಸಿಂಧು ಅವರು ಮೊದಲ ಪಂದ್ಯದಲ್ಲಿ ಇಸ್ರೇಲ್ನ ಸೆನಿಯಾ ಪೊಲಿಕರ್ಪೊವಾ ವಿರುದ್ಧ ಜಯಭೇರಿ ಮೊಳಗಿಸಿದ್ದರು.