Friday, 22nd November 2024

ಪಿ.ವಿ. ಸಿಂಧು, ಪ್ರಣೀತ್ ಶುಭಾರಂಭ

ಡೆನ್ಮಾಕ್ ಓಪನ್: ಮೊದಲ ಸುತ್ತಿನಲ್ಲೇ ಸೋತ ಪರುಪಳ್ಳಿ, ಸೌರಭ್ ಸಾತ್ವಿಕ್-ಚಿರಾಗ್ ಡಬಲ್‌ಸ್‌ ಜೋಡಿಗೆ ಜಯ

ಓಡೆನ್‌ಸ್‌:
ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಹಾಗೂ ಸಾಯಿ ಪ್ರಣೀತ್ ಇಲ್ಲಿ ನಡೆಯುತ್ತಿಿರುವ ಡೆನ್ಮಾಾರ್ಕ್ ಓಪನ್ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್‌ಸ್‌‌ನಲ್ಲಿ ಎರಡನೇ ಸುತ್ತಿಿಗೆ ಮಾಡಿದ್ದಾಾರೆ. ಆದರೆ, ಪರುಪಳ್ಳಿಿ ಕಶ್ಯಪ್ ಅವರು ಸೋತು ಟೂರ್ನಿಯಿಂದ ಹೊರ ನಡೆದಿದ್ದಾಾರೆ.

ಮಂಗಳವಾರ ನಡೆದ ಮಹಿಳೆಯರ ಸಿಂಗಲ್‌ಸ್‌‌ನ ಮೊದಲ ಸುತ್ತಿಿನ ಪಂದ್ಯದಲ್ಲಿ ಭಾರತದ ಪಿ.ವಿ ಸಿಂಧು ಅವರು 22-20, 21-18, ಅಂತರದಲ್ಲಿ ನೇರ ಸೆಟ್‌ಗಳಿಂದ ಇಂಡೋನೇಷ್ಯಾಾದ ಗ್ರೇಗೋರಿಯಾ ತುಂಜುಂಗ್ ವಿರುದ್ಧ ಗೆದ್ದು 38 ನಿಮಿಷಗಳ ಪಂದ್ಯವನ್ನು ತನ್ನದಾಗಿಸಿಕೊಂಡರು. ಆ ಮೂಲಕ ಎರಡನೇ ಸುತ್ತಿಿಗೆ ಲಗ್ಗೆೆ ಇಟ್ಟಿಿದ್ದಾಾರೆ.

ಆಗಸ್‌ಟ್‌. 25ಕ್ಕೆೆ 24ನೇ ವರ್ಷಕ್ಕೆೆ ಪದಾರ್ಪಣೆ ಮಾಡಲಿರುವ ಸಿಂಧು ಅವರು ಸ್ವಿಿಜರ್‌ಲೆಂಡ್ ನಡೆದಿದ್ದ ವಿಶ್ವ ಬ್ಯಾಾಡ್ಮಿಿಂಟನ್ ಚಾಂಪಿಯನ್‌ಶಿಪ್ ಫೈನಲ್ ಹಣಾಹಣಿಯಲ್ಲಿ ಜಪಾನ್‌ನ ನಜೋಮಿ ಒಕುಹಾರ ವಿರುದ್ಧ 21-7, 21-7 ಅಂತರದಲ್ಲಿ ಚಾಂಪಿಯನ್ ಆಗಿದ್ದರು. ಅಲ್ಲದೇ, ವಿಶ್ವ ಚಾಂಪಿಯನ್‌ಶಿಪ್ ಗೆದ್ದು ಮೊದಲ ಭಾರತೀಯ ಬ್ಯಾಾಡ್ಮಿಿಂಟನ್ ಆಟಗಾರ್ತಿ ಎಂಬ ನೂತನ ಮೈಲುಗಲ್ಲು ಸೃಷ್ಟಿಿಸಿದ್ದರು.

ಇದಾದ ಬಳಿಕ ಸಿಂಧು ಚೀನಾ ಹಾಗೂ ಕೊರಿಯಾ ಓಪನ್ ಎರಡರಲ್ಲೂ ಬಹುಬೇಗ ಹೊರ ನಡೆದಿದ್ದರು. ಇದೀಗ ಡೆನ್ಮಾಾರ್ಕ್ ಓಪನ್‌ನಲ್ಲಿ ಮೊದಲನೇ ಸುತ್ತಿಿನಲ್ಲಿ ಗೆದ್ದು ಶುಭಾರಂಭ ಮಾಡಿದ್ದು, ಎರಡನೇ ಸುತ್ತಿಿನ ಹಣಾಹಣಿಯಲ್ಲಿ ಎನ್ ಸೀ ಯಂಗ್ ವಿರುದ್ಧ ಸೆಣಸಲಿದ್ದಾಾರೆ.

ಕಶ್ಯಪ್‌ಗೆ ನಿರಾಸೆ:
38 ನಿಮಿಷಗಳ ಕಾಲ ನಡೆದಿದ್ದ ಪುರುಷರ ಸಿಂಗಲ್‌ಸ್‌ ಮೊದಲ ಸುತ್ತಿಿನ ಪಂದ್ಯದಲ್ಲಿ ಭಾರತದ ಪರುಪಳ್ಳಿಿ ಕಶ್ಯಪ್ ಅವರು 13-21, 12-21 ಅಂತರದಲ್ಲಿ ನೇರ ಸೆಟ್‌ಗಳಿಂದ ಥಾಯ್ಲೆೆಂಡ್‌ನ ಸಿತ್ತಿಿಕೋಮ್ ಥಮ್ಮಾಾಸಿನ್ ವಿರುದ್ಧ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾಾರೆ. ಇವರ ಜತೆ ಸೌರಭ್ ವರ್ಮಾ ಅವರು 21-19, 11-21, 17-21 ಅಂತರದಲ್ಲಿ ನೇದರ್‌ಲೆಂಡ್‌ನ ಮಾರ್ಕ್ ಕಾಲ್ಜೌೌ ವಿರುದ್ಧ ಸೋತು ಹೊರ ನಡೆದರು.

ಪುರುಷರ ಸಿಂಗಲ್‌ಸ್‌ ಹಣಾಹಣಿಯಲ್ಲಿ ಭಾರತದ ಬಿ. ಸಾಯಿ ಪ್ರಣೀತ್ ಅವರು 21-14, 21-17 ಅಂತರದಲ್ಲಿ ಸ್ಟಾಾರ್ ಆಟಗಾರ ಲಿನ್ ಡಾನ್ ವಿರುದ್ಧ 35 ನಿಮಿಷಗಳ ಕಾಳಗದಲ್ಲಿ ಸುಲಭವಾಗಿ ಜಯ ಸಾಧಿಸಿ ಎರಡನೇ ಸುತ್ತಿಿಗೆ ಲಗ್ಗೆೆ ಇಟ್ಟಿಿದ್ದಾಾರೆ. ಹೈದರಾಬಾದ್ ಆಟಗಾರ ಎರಡನೇ ಸುತ್ತಿಿನ ಪಂದ್ಯದಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತ ಜಪಾನ್‌ನ ಕೆಂಟಾ ಮೊಮೊಟಾ ಅವರ ವಿರುದ್ಧ ಕಠಿಣ ಸವಾಲು ಎದುರಿಸಲಿದ್ದಾಾರೆ.

ಪುರುಷರ ಡಬಲ್‌ಸ್‌ ವಿಭಾಗದಲ್ಲಿ ಭಾರತದ ಸಾತ್ವಿಿಕ್‌ಸಾಯಿರಾಜ್ ರಂಕಿರೆಡ್ಡಿಿ ಹಾಗೂ ಚಿರಾಗ್ ಜೋಡಿಯು ಕೊರಿಯಾದ ಕಿಮ್ ಜಿ ಜಂಗ್ ಮತ್ತು ಲೀ ಯಾಂಗ್ ಡೇ ಜೋಡಿಯ ವಿರುದ್ಧ 24-22, 21-11 ಅಂತರದಲ್ಲಿ ಗೆದ್ದು ಡೆನ್ಮಾಾರ್ಕ್ ಓಪನ್ ನಲ್ಲಿ ಶುಭಾರಂಭ ಕಂಡಿದೆ.

ಇತ್ತೀಚೆಗೆ ಬಿಡುಗಡೆಯಾಗಿದ್ದ ಬಿಡಬ್ಲ್ಯುಎಫ್ ವಿಶ್ವ ಶ್ರೇಯಾಂಕದಲ್ಲಿ ಪಿ.ವಿ ಸಿಂಧು ಅವರು ಒಂದು ಸ್ಥಾಾನ ಕುಸಿದು ಆರನೇ ಶ್ರೇಯಾಂಕ ಪಡೆದಿದ್ದರು. ಪುರುಷರ ಸಿಂಗಲ್‌ಸ್‌ ವಿಭಾಗದಲ್ಲಿ ಪರುಪಳ್ಳಿಿ ಕಶ್ಯಪ್ 25ನೇ ಸ್ಥಾಾನದಲ್ಲೇ ಮುಂದುವರಿದಿದ್ದರು.