Saturday, 14th December 2024

ಕಂಚಿನ ಪದಕ ಗೆದ್ದ ಪಿ.ವಿ.ಸಿಂಧು

ಟೋಕಿಯೋ : ತೀವ್ರ ಹಣಾಹಣಿಯಲ್ಲಿ ಟೋಕಿಯೋ ಒಲಂಪಿಕ್ಸ್ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಪಿವಿ ಸಿಂಧು ಸತತ ಎರಡನೇ ಬಾರಿಗೆ ಕಂಚಿನ ಪದಕವನ್ನು ಗೆದ್ದ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕವನ್ನು ಬ್ಯಾಡ್ಮಿಂಟನ್ ತಾರೆ ಗೆಲ್ಲುವ ಮೂಲಕ ಹೊತ್ತು ತಂದಿದ್ದಾರೆ.

ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು, ಕಂಚಿನ ಪದಕವನ್ನು ಮಹಿಳೆಯರ ಸಿಂಗಲ್ಸ್ ವಿಭಾಗದ ಬ್ಯಾಡ್ಮಿಂಟನ್ ನಲ್ಲಿ ಗೆದ್ದಿದ್ದಾರೆ. ಚೀನಾದ ಹಿ ಬಿಂಗ್ ಜಿಯಾವೋ ವಿರುದ್ಧ 21-13, 21-15 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ.