Saturday, 14th December 2024

ಆಲ್’ರೌಂಡರ್ ಶೋಯೆಬ್‌ ಮಲಿಕ್ ಕಾರು ಅಪಘಾತ

ಲಾಹೋರ್‌: ಟೆನ್ನಿಸ್‌ ಸೆನ್ಸೇಶನ್ ಸಾನಿಯಾ ಮಿರ್ಜಾ ಪತಿ‌, ಪಾಕಿಸ್ತಾನದ ಆಲ್ ರೌಂಡರ್ ಶೋಯೆಬ್‌ ಮಲಿಕ್ ಅವರ ಕಾರು ಅಪಘಾತಕ್ಕೀಡಾಗಿದೆ.

ಶೋಯೆಬ್‌ ಮಲಿಕ್ ಅತಿ ವೇಗವಾಗಿ ಕಾರನ್ನು ಚಲಿಸುವಾಗ ನಿಯಂತ್ರಣ ತಪ್ಪಿ ನಿಂತ ಟ್ರಕ್ ಗೆ ಗುದ್ದಿ ಈ ರೀತಿ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಮಲಿಕ್, ನಾನು ಸಂಪೂರ್ಣವಾಗಿ ಸರಿಯಾಗಿದ್ದೇನೆ. ನನಗೆ ಯಾವುದೇ ತೊಂದರೆಯಿಲ್ಲ. ನಿಮ್ಮೆಲ್ಲರ ಪ್ರೀತಿ ಮತ್ತು ಕಾಳಜಿಗೆ ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.