Saturday, 7th September 2024

ರಿಜ್ವಾನ್, ಶಕೀಲ್ ಅರ್ಧಶತಕ: ಪಾಕಿಸ್ತಾನ 286ಕ್ಕೆ ಆಲೌಟ್

ಹೈದರಾಬಾದ್: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನೆದರ್ಲೆಂಡ್ಸ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ಸೆಣಸಾಟ ನಡೆಯುತ್ತಿದೆ.

ಇತ್ತೀಚಿನ ವರದಿ ಪ್ರಕಾರ, ಪಾಕಿಸ್ತಾನ ತಂಡ ದಲ್ಲಿ ಎರಡು ಅರ್ಧಶತಕ ಮೂಡಿ ಬಂದಿದೆ. ವಿಕೆಟ್ ಕೀಪರ್‌ ರಿಜ್ವಾನ್ ಹಾಗೂ ಆಲ್ರೌಂಡರ್‌ ಶಕೀಲ್ ತಲಾ 68 ಗಳಿಸಿ ಔಟಾದರು. ಇವರುಗಳ ಇನ್ನಿಂಗ್ಸ್ ನಲ್ಲಿ ಒಂದು ಸಿಕ್ಸರ್‌ ಹಾಗೂ 17  ಬೌಂಡರಿ ಮೂಡಿ ಬಂದಿವೆ. ಇವರನ್ನು ಹೊರತುಪಡಿಸಿ, ಮೊಹಮ್ಮದ್ ನವಾಜ್ ಹಾಗೂ ಶಾಬಾಜ್ ಖಾನ್ ಕ್ರಮ ವಾಗಿ 39 ಮತ್ತು 32 ಗಳಿಸಿದರು. ಅಂತಿಮವಾಗಿ ಒಂದು ಓವರು ಬಾಕಿ ಇರುವಾಗಲೇ 286ಕ್ಕೆ ಆಲೌಟ್ ಆಯಿತು.

ನೆದರ್‌ಲ್ಯಾಂಡ್ ಪರ ಬಾಸ್ ಡೀ ಲೀಡೆ ನಾಲ್ಕು ವಿಕೆಟ್ ಕಿತ್ತು, ಪಾಕಿಸ್ತಾನದ ಬ್ಯಾಟಿಂಗಿಗೆ ಲಗಾಮು ಹಾಕಿದರು.

ವಿಶ್ವಕಪ್ 2023ರ ಎರಡನೇ ಪಂದ್ಯ ಇದಾಗಿದ್ದು ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್, ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಪಾಕಿಸ್ತಾನವು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾ ಷ್ಟ್ರೀಯ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಡಿದ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಸೋತಿರುವುದು ಗಮನಾರ್ಹ.

ನೆದರ್ಲ್ಯಾಂಡ್ಸ್ (ಪ್ಲೇಯಿಂಗ್ XI): ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್(ನಾಯಕ/ವಿಕೆಟ್​ ಕೀಪರ್), ಬಾಸ್ ಡಿ ಲೀಡೆ, ತೇಜಾ ನಿಡಮನೂರು, ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್

ಪಾಕಿಸ್ತಾನ (ಪ್ಲೇಯಿಂಗ್ XI): ಇಮಾಮ್ – ಉಲ್ – ಹಕ್, ಫಖರ್ ಜಮಾನ್, ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್(ವಿಕೆಟ್​ ಕೀಪರ್​), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್​​​

 

Leave a Reply

Your email address will not be published. Required fields are marked *

error: Content is protected !!