ದುಬೈ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕಿ ಫಾತಿಮಾ ಸನಾ(Fatima Sana) ತಮ್ಮ ತಂದೆಯ ನಿಧನದಿದಾಗಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಿಂದ ಅರ್ಧದಲ್ಲೇ ತವರಿಗೆ ಮರಳಿದ್ದಾರೆ. ಇಂದು ನಡೆಯುವ ಆಸ್ಟ್ರೇಲಿಯಾ(PAKW vs AUSW) ವಿರುದ್ಧದ ಪಂದ್ಯಕ್ಕೆ ಅವರು ಅಲಭ್ಯರಾಗಲಿದ್ದಾರೆ.
ಗುರುವಾರ ಫಾತಿಮಾ ತಂದೆ ನಿಧನರಾಗಿದ್ದರು. ಅವರು ತವರಿಗೆ ಮರಳಿದ ವಿಚಾರವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ. ಸನಾ ಅನುಪಸ್ಥಿತಿಯಲ್ಲಿ ಉಪನಾಯಕಿ ಮುನೀಬಾ ಅಲಿ ಅವರು ಆಸೀಸ್ ವಿರುದ್ಧದ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಪಿಸಿಬಿ ತಿಳಿಸಿದೆ.
‘ಎ’ ಗುಂಪಿನಲ್ಲಿ ಎರಡು ಪಂದ್ಯಗಳಿಂದ ಎರಡು ಅಂಕ ಗಳಿಸಿಋುವ ಪಾಕಿಸ್ತಾನಕ್ಕೆ ಸೆಮಿಫೈನಲ್ ಪ್ರವೇಶ ಪಡೆಯಬೇಕಿದ್ದರೆ ಇಂದಿನ ಆಸೀಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಇದೇ ವೇಳೆ ನಾಯಕಿಯ ಅಲಭ್ಯತೆ ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಈ ವಿಶ್ವಕಪ್ನಲ್ಲಿ ಸನಾ ಅವರು ಅತೀ ಕಿರಿಯ ನಾಯಕಿ ಆಗಿದ್ದಾರೆ. 22ರ ಹರೆಯದ ಅವರು ಪಾಕಿಸ್ಥಾನದ ಅಭಿಯಾನದಲ್ಲಿ ಉತ್ತಮ ಕೊಡುಗೆ ನೀಡಿದ್ದಾರೆ. ಶ್ರೀಲಂಕಾ ವಿರುದ್ಧ ಗೆದ್ದ ಪಂದ್ಯದಲ್ಲಿ ಅವರು 30 ರನ್ ಮತ್ತು ಎರಡು ನಿರ್ಣಾಯಕ ವಿಕೆಟ್ ಪಡೆದಿದ್ದರು.
ಇದನ್ನೂ ಓದಿ Womens T20 World Cup: ಭಾರತದ ಸೆಮಿಫೈನಲ್ ಲೆಕ್ಕಾಚಾರ ಹೇಗಿದೆ?
ಒಂದು ವೇಳೆ ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯ ಗೆದ್ದರೆ ಅದು ನೇರವಾಗಿ ಸೆಮಿಫೈನಲಿಗೇರಲಿದೆ. ಈಗಾಗಲೇ ನ್ಯೂಜಿಲ್ಯಾಂಡ್ ಮತ್ತು ಶ್ರೀಲಂಕಾ ತಂಡವನ್ನು ಸೋಲಿಸಿರುವ ಆಸ್ಟ್ರೇಲಿಯ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿದೆ.
ಭಾರತಕ್ಕೆ ನ್ಯೂಜಿಲ್ಯಾಂಡ್ ತೀವ್ರ ಸ್ಪರ್ಧೆ ನೀಡುವ ಸಾಧ್ಯತೆಯಿದೆ. ನ್ಯೂಜಿಲ್ಯಾಂಡ್ ಆಡಿದ ಎರಡು ಪಂದ್ಯದಲ್ಲಿ ಒಂದರಲ್ಲಿ ಗೆದ್ದು ಎರಡಂಕ ಹೊಂದಿದೆ. ನ್ಯೂಜಿಲ್ಯಾಂಡ್ ತಂಡವು ಶನಿವಾರ (ಅ. 12) ಶ್ರೀಲಂಕಾವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಗೆದ್ದರೆ ಅದು ಕೂಡ ನಾಲ್ಕು ಅಂಕ ಪಡೆಯಲಿದೆ. ಆಗ ಅ. 14ರಂದು ನಡೆಯುವ ಪಾಕಿಸ್ಥಾನ ಮತ್ತು ನ್ಯೂಜಿಲ್ಯಾಂಡ್ ನಡುವಣ ಪಂದ್ಯದ ಫಲಿತಾಂವವೇ ಯಾವ ತಂಡ ಸೆಮಿಫೈನಲಿಗೆ ತಲುಪುವುದು ಎಂಬುದನ್ನು ನಿರ್ಣಯಿಸುವ ಸಾಧ್ಯತೆಯಿದೆ…